ದಕ್ಷಿಣ ಕನ್ನಡ ಜಿ.ಪಂ. ನರ್ವಾಡೆ ವಿನಾಯಕ್ ಕರ್ಭಾರಿ ನೂತನ ಸಿಇಒ

mng--8 July Narwade Vinayak
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ನೂತನ ಸಿಇಒ ಆಗಿ ನರ್ವಾಡೆ ವಿನಾಯಕ್ ಕರ್ಭಾರಿ (ಐಎಎಸ್) ಅವರನ್ನು ನೇಮಕಗೊಳಿಸಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಸಿಇಒ ಆಗಿದ್ದ ಡಾ.ಆನಂದ್ ಕೆ. ಅವರನ್ನು ವಿಜಯಪುರ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ. ಇವರಿಂದ ತೆರವಾದ ಸ್ಥಾನಕ್ಕೆ ಮಡಿಕೇರಿ ಉಪವಿಭಾಗದಲ್ಲಿ ಹಿರಿಯ ಸಹಾಯಕ ಆಯುಕ್ತರಾಗಿದ್ದ 2021ನೇ ಬ್ಯಾಚ್‌ನ ವಿನಾಯಕ್ ಅವರನ್ನು ದ.ಕನ್ನಡ ಜಿಲ್ಲೆಗೆ ನೇಮಕ ಮಾಡಲಾಗಿದೆ.

ಡಾ.ಆನಂದ್ ಕೆ. ಅವರು 2023ರ ಜೂನ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net