ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಣಬೆ ಪದಾರ್ಥ ತಿಂದು ತಂದೆ-ಮಗ ಸಾವು!? ರಾತ್ರಿಯಿಡೀ ನರಳಾಡಿ ಮನೆಯ ಅಂಗಳದಲ್ಲೇ ದುರಂತ ಅಂತ್ಯ

death
Published on

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಮನೆಯೊಂದರಲ್ಲಿ ತಂದೆ-ಮಗ ಇಬ್ಬರೂ ನಿಗೂಢವಾಗಿ ಮೃತಪಟ್ಟಿದ್ದು, ಸಾವಿಗೆ ಅಣಬೆ ಪದಾರ್ಥ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಮಿಯ್ಯಾರು ಸಾವೆದಕಲಪು ಎಂಬಲ್ಲಿ ಮಂಗಳವಾರ ಮುಂಜಾನೆ ಈ ಘಟನೆ ನಡೆದಿದೆ. ಗುರುವ(75) ಮತ್ತು ಇವರ ಪುತ್ರ ಓಡಿ(45) ಮೃತ ದುರ್ದೈವಿಗಳು.

ಇಂದು ಬೆಳಗ್ಗೆ ತಂದೆ-ಮಗನ ಶವಗಳ ಮನೆಯ ಅಂಗಳದಲ್ಲಿ ಕಂಡುಬಂದಿದೆ. ಈ ಮನೆಯಲ್ಲಿ ತಂದೆ ಹಾಗೂ ಇಬ್ಬರು ಮಕ್ಕಳು ವಾಸವಿದ್ದರು. ಕಡು ಬಡತನನಿಂದ ಕುಟುಂಬ ನೊಂದಿತ್ತು. ಮನೆಯೊಳಗೆ ಅಣಬೆಯಿಂದ ತಯಾರಿಸದ ಅಡುಗೆ ಇದೆ. ನಿನ್ನೆ ರಾತ್ರಿ ಊಟಕ್ಕೆ ವಿಷಪೂರಿತ ಅಣಬೆ ಸೇವಿಸಿರಬಹುದು. ಊಟದ ಬಳಿಕ ವಿಷ ಉಲ್ಬಣಗೊಂಡು ಅಂಗಳದಲ್ಲಿ ನರಳಾಡಿ ಪ್ರಾಣ ಬಿಟ್ಟಿರಬೇಕು ಎಂದು ಶಂಕಿಸಲಾಗಿದೆ.

ನಿನ್ನೆ ರಾತ್ರಿ ಅಪ್ಪ-ಮಗ ಹೊರತುಪಡಿಸಿ ಮನೆಯಲ್ಲಿ ಯಾರು ಇಲ್ಲದ ಕಾರಣ ಆಸ್ಪತ್ರೆಗೂ ಹೋಗಲು ಆಗಿಲ್ಲ. ನರಳಾಡಿಯೇ ಮೃತಪಟ್ಟಿದ್ದಾರೆ. ಗುರುವ ಅವರ ಮತ್ತೊಬ್ಬ ಮಗ ಕರ್ತ ಕುಡಿತದ ಚಟ ಅಂಟಿಸಿಕೊಂಡಿದ್ದು, ಇಂದು ಮುಂಜಾನೆ ಮನೆಗೆ ಬಂದಿದ್ದಾನೆ. ಅಷ್ಟರಲ್ಲಿ ಅವರಿಬ್ಬರೂ ಮೃತಪಟ್ಟಿದ್ದರು. ಧರ್ಮಸ್ಥಳದ ಠಾಣೆ ಪೊಲೀಸರು ಸ್ಥಳಕ್ಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net