ಕರೊನಾಮುಕ್ತರ ಸಂಖ್ಯೆ ಹೆಚ್ಚಳ, ದ.ಕ.ದಲ್ಲಿ ಒಂದೇ ದಿನ 519 ಮಂದಿ ಮನೆಗೆ

corona
Published on

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕರೊನಾ ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಹೊರಬರುವವರ ಸಂಖ್ಯೆ ಹೆಚ್ಚಾಗತೊಡಗಿದೆ. ಮಂಗಳವಾರ 519 ಮಂದಿ ಬಿಡುಗಡೆಯಾಗಿದ್ದಾರೆ. ಇವರ ಪೈಕಿ 63 ಮಂದಿ ಕೋವಿಡ್ ಕೇರ್ ಕೇಂದ್ರ, 62 ಮಂದಿ ಆಸ್ಪತ್ರೆ ಹಾಗೂ 394 ಮಂದಿ ಗೃಹ ಐಸೋಲೇಶನ್‌ನಲ್ಲಿದ್ದವರು.

ಇನ್ನೊಂದೆಡೆ, ಪಾಸಿಟಿವ್ ಆದವರ ಸಂಖ್ಯೆಯಲ್ಲೂ ಒಂದಷ್ಟು ಏರಿಕೆ ಕಂಡುಬಂದಿದೆ. ಮಂಗಳವಾರ 243 ಮಂದಿಗೆ ಸೋಂಕು ದೃಢಪಟ್ಟಿದ್ದರೆ 9 ಮಂದಿ ಸಾವನ್ನಪ್ಪಿದ್ದಾರೆ. 243ರಲ್ಲಿ 137 ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, 106 ಮಂದಿ ಲಕ್ಷಣ ಹೊಂದಿಲ್ಲ.

ಮಂಗಳೂರಿನ 189, ಬಂಟ್ವಾಳದ 30, ಪುತ್ತೂರಿನ 6, ಸುಳ್ಯದ 4, ಬೆಳ್ತಂಗಡಿಯ 10 ಮತ್ತು ಇತರ ಜಿಲ್ಲೆಯ ನಾಲ್ವರು ಈ ಸಾಲಿಗೆ ಸೇರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಸಂಖ್ಯೆ 7596ಕ್ಕೆ ಏರಿದ್ದು ಸಕ್ರಿಯ ಪ್ರಕರಣಗಳು 2625. ಬಿಡುಗಡೆಯಾದವರ ಒಟ್ಟು ಸಂಖ್ಯೆ 4734 ತಲಪಿದೆ. ಒಟ್ಟು ಸಾವಿನ ಸಂಖ್ಯೆ 237ಕ್ಕೇರಿದೆ.

ಕಾಸರಗೋಡಿನ 147 ಮಂದಿಗೆ ಕರೊನಾ: ಜಿಲ್ಲೆಯ 147 ಮಂದಿಯಲ್ಲಿ ಮಂಗಳವಾರ ಕೋವಿಡ್-19 ದೃಢಪಟ್ಟಿದೆ. 1,242 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದ್ದರೆ, 105 ಮಂದಿಯ ರೋಗಮೂಲ ಪತ್ತೆ ಸಾಧ್ಯವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net