

ಮಂಗಳೂರು: ಏ.16ರಂದು ಪಾಸಿಟಿವ್ ಆಗಿದ್ದ ಉಪ್ಪಿನಂಗಡಿ ನಿವಾಸಿಯ ಪತ್ನಿ (30)ಗೆ ಕರೊನಾ ಸೋಂಕು ದೃಢಪಟ್ಟಿದೆ.
ರೋಗಿ ಸಂಖ್ಯೆ 325 ಸಂಪರ್ಕದಿಂದ ಪತ್ನಿಗೆ ಕರೊನಾ ಸೋಂಕು ಪತ್ತೆಯಾಗಿದ್ದು, ಮಂಗಳೂರಿನ ವೆನ್‌ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾ.27ರಂದು ದೆಹಲಿಯಿಂದ ಬಂದಿದ್ದ ಉಪ್ಪಿನಂಗಡಿ ನಿವಾಸಿಯನ್ನು ಏ.1ರಂದು ಪತ್ತೆ ಮಾಡಿ ಜಿಲ್ಲಾಡಳಿತದಿಂದ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಮಧ್ಯೆ ಈತ ಪತ್ನಿ ಮತ್ತು ಮನೆಯವರ ಜೊತೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ದ.ಕ ಜಿಲ್ಲೆಯಲ್ಲಿ ಸದ್ಯ ಕರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇದರಲ್ಲಿ 12ಮಂದಿ ಡಿಸ್ಚಾರ್ಜ್ ಆಗಿದ್ದು, ಒಬ್ಬರು ಇಂದು ಸಾವನ್ನಪ್ಪಿದ್ದಾರೆ. ಸದ್ಯ ಇಬ್ಬರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.