ದ.ಕ. 374, ಉಡುಪಿ 247 ಪಾಸಿಟಿವ್, ಒಟ್ಟು 10 ಮಂದಿ ಸಾವು

corona
Published on

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮಂಗಳವಾರ ಮೂರು ಸಾವು ಸೇರಿದಂತೆ 374 ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಜಿಲ್ಲೆಯಲ್ಲಿ ಒಟ್ಟು ಕರೊನಾ ಪ್ರಕರಣ 15,452 ತಲುಪಿದ್ದರೆ ಸಾವಿನ ಪ್ರಕರಣ 412ಕ್ಕೇರಿದೆ.

ಮಂಗಳವಾರದ ಪ್ರಕರಣಗಳಲ್ಲಿ 254 ರೋಗಲಕ್ಷಣಗಳಿರುವ ಹಾಗೂ 120 ರೋಗಲಕ್ಷಣಗಳಿಲ್ಲದವು. ಮಂಗಳೂರು ತಾಲೂಕಿನ 219, ಬಂಟ್ವಾಳದ 61, ಪುತ್ತೂರಿನ 36, ಸುಳ್ಯದ 6, ಬೆಳ್ತಂಗಡಿಯ 32, ಇತರ ಜಿಲ್ಲೆಗಳ 20 ಮಂದಿಗೆ ಸೋಂಕು ದೃಢಪಟ್ಟಿದೆ. 232 ಮಂದಿ ಮಂಗಳವಾರ ಸೋಂಕುಮುಕ್ತಗೊಂಡಿದ್ದಾರೆ, ಬಿಡುಗಡೆಯಾದವರ ಒಟ್ಟು ಸಂಖ್ಯೆ 11,986ಕ್ಕೇರಿದೆ.

ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 247 ಮಂದಿಗೆ ಕರೊನಾ ಪಾಸಿಟಿವ್ ವರದಿಯಾಗಿದೆ. ಮೃತಪಟ್ಟ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸಾವಿನ ಸಂಖ್ಯೆ 121ಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 13,080ಕ್ಕೆೆ ಏರಿಕೆಯಾಗಿದೆ.

1,424 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 311 ಮಂದಿಯ ವರದಿ ಬರಲು ಬಾಕಿ ಇದೆ. 1844 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಯ 166 ಮಂದಿ ಒಳಗೊಂಡಂತೆ ಕೇರಳದಲ್ಲಿ ಮಂಗಳವಾರ 3,026 ಮಂದಿಗೆ ಕೋವಿಡ್ ಕಾಣಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net