

ಮಂಗಳೂರು: ದ.ಕ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 386 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಜರಗಲಿದ್ದು ಇದರಲ್ಲಿ 30 ಕಡೆಗಳ ಗಣೇಶೋತ್ಸವ ಮೆರವಣಿಗೆಗಳನ್ನು ಅತೀ ಸೂಕ್ಷ್ಮವೆಂದು ಪೊಲೀಸ್ ಇಲಾಖೆ ಗುರುತಿಸಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸೆ.6ರಿಂದ ಸೆ.17ರವರೆಗೆ ಒಟ್ಟು 165 ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲಾಗುತ್ತದೆ. ಇದರಲ್ಲಿ 22 ಅತೀ ಸೂಕ್ಷ್ಮ, 64 ಸೂಕ್ಷ್ಮ ಮತ್ತು 79 ಸಾಮಾನ್ಯ ಗಣೇಶೋತ್ಸವ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ದ.ಕ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಸೆ.6ರಿಂದ ಸೆ.13ರವರೆಗೆ ಒಟ್ಟು 221 ಕಡೆಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಸರ್ಜನೆ ಮಾಡಲಾಗುತ್ತದೆ. ಇದರಲ್ಲಿ 8 ಅತೀ ಸೂಕ್ಷ್ಮ, 53 ಸೂಕ್ಷ್ಮ ಹಾಗೂ 160 ಸಾಮಾನ್ಯ ಗಣೇಶೋತ್ಸವ ಎಂದು ಪೊಲೀಸ್ ಅಧೀಕ್ಷಕ ಯತೀಶ್ ಎನ್. ತಿಳಿಸಿದ್ದಾರೆ.
ಕಮಿಷನರೆಟ್ ವ್ಯಾಪ್ತಿಯ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವದ ವಿವರ ಇಂತಿದೆ: ಪಣಂಬೂರು ಉಪವಿಭಾಗದ ಪಣಂಬೂರು -7, ಕಾವೂರು-15, ಬಜಪೆ-11, ಸುರತ್ಕಲ್-13, ಮುಲ್ಕಿ-18, ಮೂಡುಬಿದಿರೆ-29. ದಕ್ಷಿಣ ಉಪವಿಭಾಗ ವ್ಯಾಪ್ತಿಯ ಮಂಗಳೂರು ಗ್ರಾಮಾಂತರ-6, ಕಂಕನಾಡಿ ನಗರ - 7, ಉಳ್ಳಾಲ-9, ಕೊಣಾಜೆ-7. ಕೇಂದ್ರ ಉಪವಿಭಾಗದ ಮಂಗಳೂರು ಉತ್ತರ-6, ಮಂಗಳೂರು ದಕ್ಷಿಣ-15, ಉರ್ವ-4, ಮಂಗಳೂರುಪೂರ್ವ-13.
ದ.ಕ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಈ ವರ್ಷ ಒಟ್ಟು 105 ಸಾರ್ವಜನಿಕ ಗಣೇಶೋತ್ಸವಗಳು ನಡೆಯಲಿವೆ. ಠಾಣಾ ವ್ಯಾಪ್ತಿಗಳ ವಿವರ ಇಂತಿದೆ: ಬಂಟ್ವಾಳ ನಗರ-11, ಬಂಟ್ವಾಳ ಗ್ರಾಮಾಂತರ-15, ವಿಟ್ಲ-20, ಬೆಳ್ತಂಗಡಿ-24, ಧರ್ಮಸ್ಥಳ-19, ಪೂಂಜಾಲಕಟ್ಟೆ-7, ವೇಣೂರು-20, ಪುತ್ತೂರು ನಗರ-15, ಪುತ್ತೂರು ಗ್ರಾಮಾಂತರ-17, ಉಪ್ಪಿನಂಗಡಿ-17, ಕಡಬ-13, ಸುಳ್ಯ-16, ಸುಬ್ರಹ್ಮಣ್ಯ -9, ಬೆಳ್ಳಾರೆ-18.