ದ.ಕ. 271 ಪಾಸಿಟಿವ್, 6 ಸಾವು

Corona
Published on

ಮಂಗಳೂರು: ದ.ಕ ಜಿಲ್ಲೆಯಲ್ಲಿ ಶನಿವಾರ ಒಟ್ಟು 271 ಕರೊನಾ ಪಾಟಿಸಿವ್ ಪ್ರಕರಣ ಹಾಗೂ 6 ಸಾವು ವರದಿಯಾಗಿವೆ. ಮೃತರಾದವರಲ್ಲಿ ನಾಲ್ವರು ಮಂಗಳೂರಿನವರು ಹಾಗೂ ಇಬ್ಬರು ಹೊರಜಿಲ್ಲೆಯವರು.

ಶನಿವಾರ ವರದಿಯಾದ ಸೋಂಕಿತರಲ್ಲಿ 152 ಮಂದಿ ರೋಗ ಲಕ್ಷಣವಿರುವವರು ಹಾಗೂ 119 ಮಂದಿ ಲಕ್ಷಣ ರಹಿತರು. ಮಂಗಳೂರಿನ 177, ಬಂಟ್ವಾಳ 47, ಪುತ್ತೂರು 23, ಸುಳ್ಯ 1, ಬೆಳ್ತಂಗಡಿ 14, ಇತರ ಜಿಲ್ಲೆಯ 9 ಮಂದಿ ಸೇರಿದ್ದಾರೆ. ಇದರಲ್ಲಿ ದೊಡ್ಡ ಸಂಖ್ಯೆ ಎಂದರೆ 128ರಷ್ಟು ಮಂದಿ ಐಎಲ್‌ಐ ಲಕ್ಷಣ ಇದ್ದವರು. 39 ಮಂದಿಗೆ ನೇರಸಂಪರ್ಕದಿಂದ ಸೋಂಕು ತಗಲಿದ್ದರೆ 90 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ.

ಜಿಲ್ಲೆಯಲ್ಲಿ ಹೋಮ್ ಐಸೊಲೇಶನ್‌ನಲ್ಲಿದ್ದ 147, ಆಸ್ಪತ್ರೆಗಳಿಂದ 48 ಮಂದಿ, ಕೋವಿಡ್ ಕೇರ್ ಸೆಂಟರ್‌ಗಳಿಂದ 7 ಮಂದಿ ಸೇರಿದಂತೆ 202 ಜನ ಸೋಂಕು ಮುಕ್ತರಾಗಿದ್ದಾರೆ. ಈ ಮೂಲಕ ಒಟ್ಟು ಡಿಸ್‌ಚಾರ್ಜ್ ಆದವರ ಸಂಖ್ಯೆ 6317, ಪಾಸಿಟಿವ್ ಸಂಖ್ಯೆ 8649, ಸಕ್ರಿಯ ಪ್ರಕರಣಗಳು 2070, ಸಾವಿನ ಸಂಖ್ಯೆ 262 ತಲುಪಿದೆ.

ಕಾಸರಗೋಡು 81

ಕಾಸರಗೋಡು: ಜಿಲ್ಲೆಯಲ್ಲಿ 81 ಮಂದಿ ಸೇರಿ ಕೇರಳದಲ್ಲಿ ಶನಿವಾರ 1608 ಜನರಲ್ಲಿ ಕೋವಿಡ್ 19 ದೃಢಪಟ್ಟಿದೆ. ಕಾಸರಗೋಡಿನ ಒಬ್ಬರು ಸೇರಿದಂತೆ ರಾಜ್ಯದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. 803 ಮಂದಿ ಗುಣಮುಖರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net