ದ.ಕ.17 ಮಂದಿಗೆ ಸೋಂಕು

Corona Positive Case - Copy
Published on

ಮಂಗಳೂರು: ದ.ಕ ಜಿಲ್ಲೆಯಲ್ಲಿ ಮಹಾರಾಷ್ಟ್ರ, ಗೋವಾದಿಂದ ಬಂದ 17 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ.

ಮುಂಬೈನಿಂದ ಉಡುಪಿಗೆ ಆಗಮಿಸಿದ್ದ ಮೂರು ಕುಟುಂಬಗಳ ಒಟ್ಟು 11 ಮಂದಿಯನ್ನು ಅಲ್ಲೇ ನಿಗಾವಣೆಯಲ್ಲಿರಿಸಿದ್ದು, ಅದನ್ನು ಮುಗಿಸಿ ಊರಾದ ಮೂಡುಬಿದಿರೆಗೆ ಆಗಮಿಸಿದ್ದು, ಅವರ ಗಂಟಲ ದ್ರವ ಪರೀಕ್ಷೆಯಲ್ಲಿ ಕರೊನಾ ಖಾತರಿಯಾಗಿದೆ.

ಮೇ 14ರಂದು ಮುಂಬೈನಿಂದ ಆಗಮಿಸಿದ್ದ 52 ವರ್ಷ ವಯಸ್ಸಿನ ಗಂಡಸು, ಅದೇ ದಿನ ಗೋವಾದಿಂದ ಬಂದ 32 ವರ್ಷ ವಯಸ್ಸಿನ ಯುವಕ, ಉಡುಪಿಯಲ್ಲಿ ಕ್ವಾರಂಟೈನ್ ಮುಗಿಸಿ ಮಂಗಳೂರು, ಮೂಡುಬಿದಿರೆಗೆ ಆಗಮಿಸಿದವರ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಮುಂಬೈನಿಂದ ಆಗಮಿಸಿ ಉಡುಪಿಯಲ್ಲಿ ನಿಗಾವಣೆ ಪೂರ್ಣಗೊಳಿಸಿ ಬೆಳ್ತಂಗಡಿಗೆ ಬಂದಿದ್ದ ನಾಲ್ಕು ಮಂದಿಯ ಗಂಟಲು ದ್ರವ ಪರೀಕ್ಷಾ ವರದಿಯಲ್ಲಿಯೂ ಕರೊನಾ ದೃಢಪಟ್ಟಿದೆ.

ಐವರು ಬಿಡುಗಡೆ

ಕರೊನಾ ಚಿಕಿತ್ಸೆಗೊಳಪಟ್ಟು ಗುಣವಾದ 13ರ ಬಾಲಕಿ ಸೇರಿದಂತೆ ಒಟ್ಟು ಐದು ಮಂದಿ ಭಾನುವಾರ ಮನೆಗೆ ತೆರಳಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಲ್ಲಿದ್ದರೂ ಯಾವುದೇ ಗಂಭೀರ ರೋಗಿ ಇಲ್ಲ, ಎಲ್ಲರೂ ಆರೋಗ್ಯವಂತರಾಗಿಯೇ ಇದ್ದಾರೆ. ಪ್ರತಿ ದಿನವೂ ಐದು-ಆರು ಮಂದಿ ಗುಣವಾಗಿ ಮನೆಗೆ ತೆರಳುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

ಕಾಸರಗೋಡು 3 ಪಾಸಿಟಿವ್

ಕಾಸರಗೋಡು: ಜಿಲ್ಲೆಯಲ್ಲಿ ಭಾನುವಾರ ಮೂವರು ಒಳಗೊಂಡಂತೆ ಕೇರಳದಲ್ಲಿ 107 ಮಂದಿಗೆ ಕೋವಿಡ್-19 ಪಾಸಿಟಿವ್ ಆಗಿದೆ. 6 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕು ಪಾಸಿಟಿವ್ ಆದವರಲ್ಲಿ ಇಬ್ಬರು ಮಹಾರಾಷ್ಟ್ರದಿಂದ ಹಾಗೂ ಒಬ್ಬರು ಕುವೈತ್‌ನಿಂದ ಆಗಮಿಸಿದವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net