ದ.ಕ. ಜಿಲ್ಲೆ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ

corona
Published on

ಮೂರ್ನಾಲ್ಕು ದಿನಗಳ ಬಳಿಕ ಶನಿವಾರ ಕರಾವಳಿಯಲ್ಲಿ ಪಾಸಿಟಿವ್ ಸಂಖ್ಯೆ ಕಡಿಮೆ ದಾಖಲಾಗಿದೆ. ದ.ಕ. ಜಿಲ್ಲೆಯಲ್ಲಿ ಜುಲೈ 27ರಂದು 119 ಪ್ರಕರಣ ದಾಖಲಾದ ಬಳಿಕ ಸತತ ಮೂರು ದಿನ 200ರ ಆಸುಪಾಸು ಪ್ರಕರಣಗಳಿದ್ದವು. ಉಡುಪಿ ಜಿಲ್ಲೆಯಲ್ಲಿ ಜುಲೈ 28ರಂದು 109 ಮಂದಿಗೆ ಸೋಂಕು ತಗುಲಿತ್ತು. ಬಳಿಕ ಮೂರು ದಿನವೂ ಅತ್ಯಧಿಕ ಪ್ರಕರಣಗಳಿದ್ದವು.

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶನಿವಾರ 139 ಮಂದಿಗೆ ಸೋಂಕು ತಗುಲಿದ್ದು, 6 ಮಂದಿ ವಿವಿಧ ಕಾರಣಗಳೊಂದಿಗೆ ಕರೊನಾ ಪಾಸಿಟಿವ್ ಆಗಿ ಮೃತರಾಗಿದ್ದಾರೆ. ಮಂಗಳೂರಿನ 91 ಮಂದಿ, ಬಂಟ್ವಾಳದ 19 ಮಂದಿ, ಪುತ್ತೂರಿನ 9, ಬೆಳ್ತಂಗಡಿಯ 14, ಇತರ ಜಿಲ್ಲೆಗಳ 6 ಮಂದಿ ಸೋಂಕು ತಗುಲಿದವರಲ್ಲಿ ಇದ್ದಾರೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3008ಕ್ಕೆ ಏರಿಕೆಯಾಗಿದ್ದರೆ, ಒಟ್ಟು ಪ್ರಕರಣ 5852 ತಲುಪಿದೆ. ಒಟ್ಟು ಮೃತರ ಸಂಖ್ಯೆ 159. ಶನಿವಾರ 54 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 2685 ಡಿಸ್‌ಚಾರ್ಜ್ ಆಗಿದ್ದಾರೆ.

ಕಾನ್ವೆಂಟ್, ವೃದ್ಧಾಶ್ರಮ ಸೀಲ್‌ಡೌನ್

ಉಪ್ಪಿನಂಗಡಿ: ಕೊಕ್ಕಡದ ಖಾಸಗಿ ವಿದ್ಯಾಸಂಸ್ಥೆಯ ಕಾನ್ವೆಂಟ್‌ನ ಐವರು ಸಿಬ್ಬಂದಿ ಮತ್ತು ಇದೇ ಸಂಸ್ಥೆಗೆ ಸೇರಿದ ಕೌಕ್ರಾಡಿ ಗ್ರಾಮದ ವೃದ್ಧಾಶ್ರಮದಲ್ಲಿದ್ದ ಇಬ್ಬರಿಗೆ ಕರೊನಾ ದೃಢಪಟ್ಟಿದೆ. ಪರೀಕ್ಷೆಗೆ ಸ್ಯಾಂಪಲ್ ನೀಡಿದ ಐವರಲ್ಲಿ ಪಾಸಿಟವ್ ದೃಢಪಟ್ಟ ಹಿನ್ನೆಲೆ ವೃದ್ಧಾಶ್ರಮದಲ್ಲೂ ಪರೀಕ್ಷೆ ನಡೆಸಲಾಗಿತ್ತು. ಕಾನ್ವೆಂಟ್ ಮತ್ತು ಆಶ್ರಮವನ್ನು ಸೀಲ್‌ಡೌನ್ ಮಾಡಲಾಗಿದೆ.

ಕಾಸರಗೋಡು 153: ಕಾಸರಗೋಡು: ಜಿಲ್ಲೆಯ 153 ಮಂದಿ ಸಹಿತ ರಾಜ್ಯದಲ್ಲಿ 1129 ಮಂದಿಯಲ್ಲಿ ಶನಿವಾರ ಕೋವಿಡ್-19 ದೃಢಪಟ್ಟಿದೆ. ಜಿಲ್ಲೆಯ 28 ಮಂದಿ ಸೇರಿದಂತೆ 752 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net