‘ದಕ್ಷಯಜ್ಞ ಅಥವಾ ಬೃಗುಮುನಿಯ ಗರ್ವಭಂಗ’ ನಾಟಕ ಪ್ರದರ್ಶನ

Drama-games
Published on

ಮೈಸೂರು: ಶ್ರೀ ಮನೆ ಮಂಚಮ್ಮ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜ.23 ರಂದು ಮ.12 ಗಂಟೆಗೆ ಪುರಭವನದಲ್ಲಿ ‘ದಕ್ಷಯಜ್ಞ ಅಥವಾ ಬೃಗುಮುನಿಯ ಗರ್ವಭಂಗ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ಹಾರ್ಮೋನಿಯಂ ಮಾಸ್ಟರ್ ಚಾಮರಾಜನಗರ ತಾಲೂಕಿನ ಮಂಗಲ ಶಿವಣ್ಣ ಅವರ ನಿರ್ದೇಶನದಲ್ಲಿ ನಾಟಕ ಪ್ರದರ್ಶನ ಆಗಲಿದೆ ಎಂದು ಮಂಡಳಿಯ ಅಧ್ಯಕ್ಷ ಹುಯಿಲಾಳು ರಾಮಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೂತ್ರದಾರಿ ಪಾತ್ರದಲ್ಲಿ ಬೆಳವಾಡಿ ಮಹೇಶ್, 1ನೇ ದಕ್ಷಬ್ರಹ್ಮನ ಪಾತ್ರದಲ್ಲಿ ಹುಯಿಲಾಳು ರಾಮಸ್ವಾಮಿ, 2ನೇ ದಕ್ಷಬ್ರಹ್ಮನ ಪಾತ್ರದಲ್ಲಿ ಲೋಕೇಶ್, ಈಶ್ವರನ ಪಾತ್ರದಲ್ಲಿ ಗೋಕುಲಂ ಲೋಕೇಶ್, ಚಂದ್ರಮನ ಪಾತ್ರದಲ್ಲಿ ಶೆಟ್ಟನಾಯಕನಹಳ್ಳಿ ಸಿದ್ದಾರ್ಥ, ವಸುಂದರನ ಪಾತ್ರದಲ್ಲಿ ಬೆಂಗಳೂರು ಲಗ್ಗೆರೆ ರಾಮಕೃಷ್ಣ, ನಾರದನ ಪಾತ್ರದಲ್ಲಿ ಕ್ಯಾತಮಾರನಹಳ್ಳಿ ಸಾಗರ್, ಬೃಗುಮುನಿಯ ಪಾತ್ರದಲ್ಲಿ ಮಾರ್ಬಳ್ಳಿ ಗಿರೀಶ್, ಜಾಲಬ್ರಹ್ಮನ ಪಾತ್ರದಲ್ಲಿ ಹೊಸರಾಮನಹಳ್ಳಿ ರವಿಕುಮಾರ್, ದದೀಚಿ ಪಾತ್ರದಲ್ಲಿ ಎಚ್.ಡಿ.ಕೋಟೆ ಪುಟ್ಟರಾಜು, ಸತಿ ಆದಿಶಕ್ತಿ ಪಾತ್ರದಲ್ಲಿ ದೀಪಿಕ ಮೈಸೂರು, ರೋಹಿಣಿ ಪಾತ್ರದಲ್ಲಿ ಮಂಡ್ಯ ಶ್ವೇತ, ವೇದಾವತಿ ಪಾತ್ರದಲ್ಲಿ ತುಮಕೂರು ಚೈತ್ರ, ಪುಷ್ಪವತಿ, ರೇವತಿ ಪಾತ್ರದಲ್ಲಿ ರೂಪಾ ಮತ್ತು ಜ್ಯೋತಿ ಅಭಿನಯಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net