

ಸಿದ್ದಾಪುರ: ತಾಲೂಕಿನ ಹೆಗ್ಗರಣಿ ವೀರ ಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಗಣೇಶಪಾಲ್ ಜಾತ್ರೆ ಪ್ರಯುಕ್ತ ದಕ್ಷಯಜ್ಞ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಗಜಾನನ ಭಟ್ಟ ತುಳಗೇರಿ, ವಿಠ್ಠಲ ಪೂಜಾರಿ, ಗಂಗಾಧರ ಹೆಗಡೆ, ವಿಶ್ವೇಶ್ವರ ಹೆಗಡೆ ಕಟ್ಟಿನಹಕ್ಕಲು ಸಹಕರಿಸಿದರು. ನಾಟ್ಯಾಚಾರ್ಯ ಶಂಕರಭಟ್ಟ, ಆರ್.ಟಿ. ಭಟ್ಟ ಕಬ್ಗಾಲ್, ದೀಪಕ ಕುಂಕಿ, ರಘುಪತಿ ನಾಯ್ಕ ಹೆಗ್ಗರಣಿ, ಎಂ.ಟಿ. ಗೌಡ ಅರೆಹಳ್ಳ, ವೆಂಕಟ್ರಮಣ ಹೆಗಡೆ ಮಾದನಕಳ್, ಕುಶ ಹೆಗಡೆ ಇತರರು ಪಾತ್ರ ನಿರ್ವಹಿಸಿದರು.