

ವರ್ಕ್ ಶಾಪ್ ಇನ್ ಮೈಸೂರು ಸಂಸ್ಥೆಯು ಆಗಸ್ಟ್ 6 ರಂದು ಸಂಜೆ 7 ಗಂಟೆಗೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ‘ದಕ್ಲಕಥಾ ದೇವಿಕಾವ್ಯ’ ನಾಟಕ ಪ್ರದರ್ಶನ ಆಯೋಜಿಸಿದೆ.
ಬೆಂಗಳೂರಿನ ಜಂಗಮ ಕಲೆಕ್ಟಿವ್ ತಂಡ ನಾಟಕ ಪ್ರಸ್ತುತಪಡಿಸುತ್ತಿದೆ. ಕನ್ನಡದ ಕವಿ ಕೆ.ಬಿ.ಸಿದ್ದಯ್ಯ ಅವರ ಕಾವ್ಯದ ಆಯ್ದ ಭಾಗಗಳ ರಂಗರೂಪವನ್ನು ಕೆ.ಪಿ.ಲಕ್ಷ್ಮಣ್ ರಚಿಸಿ ನಿರ್ದೇಶಿಸಿದ್ದಾರೆ. ರಾಜ್ಯಾದಂತ ಪ್ರದರ್ಶನ ಕಂಡು ಜನ ಮನ್ನಣೆಗೆ ಕಾರಣವಾಗಿರುವ ಈ ನಾಟಕವು ಪ್ರೇಕ್ಷಕರ ಒತ್ತಾಯದ ಮೇರೆಗೆ ಮೈಸೂರಿನಲ್ಲೂ ಪ್ರದರ್ಶನ ಆಯೋಜಿಸಲಾಗಿದೆ.
ಸಂಚಲನ ಮೈಸೂರು ತಂಡದ ವತಿಯಿಂದ ಆ.5 ರಂದು ಸಂಜೆ 6.30ಕ್ಕೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಬಿ.ಎಂ.ಶ್ರೀ. ಅವರ ‘ಅಶ್ವತ್ಥಾಮನ್’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ನಾಟಕವನ್ನು ಮಧು ಮಳವಳ್ಳಿ ನಿರ್ದೇಶಿಸಿದ್ದಾರೆ. ಮೂಲ ಕೃತಿಯನ್ನು ಡಾ.ಪಿ.ವಿ.ನಾರಾಯಣ ಹೊಸಗನ್ನಡಕ್ಕೆ ರೂಪಾಂತರಿಸಿದ್ದಾರೆ. ಇದು ಸಾಪೋಕ್ಲೀಸನ ಏಜಾಕ್ಸ್ ಅಥವಾ ಆಯಾಸ್‌ನ ರೂಪಾಂತರವೆಂದು ಕರೆಯಲಾಗುತ್ತದೆ. ನಾಟಕದ ಸನ್ನಿವೇಶದ ಮಟ್ಟಿಗೆ ಪಾತ್ರಗಳು ನೈಜವಾಗಿರಲಿವೆ.