ಯೋಜನೆಗಳನ್ನು ಜನೆತೆಗೆ ಮುಟ್ಟಿಸಿ:ಸಂಸದ ಸಂಗಣ್ಣ

DAK PUBLIC ABHIYAN KOPPAL MP SANGANNA KARADI
ಕೊಪ್ಪಳದಲ್ಲಿ ಗುರುವಾರ ಅಂಚೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಅಂಚೆ ಸಾರ್ವಜನಿಕ ಅಭಿಯಾನ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಸಂಸದ ಸಂಗಣ್ಣ ಕರಡಿ, ವಿಪ ಸದಸ್ಯೆ ಹೇಮಲತಾ ನಾಯಕ, ಕುಲಪತಿ ಬಿ.ಕೆ.ರವಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣಾ ಉಕ್ಕುಂದ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್, ಪ್ರಮುಖರಾದ ಮಂಜುಳಾ ಕರಡಿ, ಮಹಾಲಕ್ಷ್ಮೀ ಕಂದಾರಿ ಇದ್ದರು.
Published on

ಕೊಪ್ಪಳ: ಜಗತ್ತಿನಲ್ಲಿ ಅತಿ ದೊಡ್ಡ ಸಂಪರ್ಕ ಜಾಲ ಹೊಂದಿರುವ ಅಂಚೆ ಇಲಾಖೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅಧಿಕಾರಿಗಳು ಅವುಗಳನ್ನು ಜನರಿಗೆ ತಲುಪಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಅಂಚೆ ಇಲಾಖೆಯಿಂದ ನಗರದ ಸಾಹಿತ್ಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂಚೆ ಸಾರ್ವಜನಿಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಚೆ ಇಲಾಖೆ ಪ್ರಾಮಾಣಿಕತೆಗೆ ಹೆಸರಾಗಿದೆ. ಕೆಲ ಅಧಿಕಾರಿಗಳು ಜನರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಹೀಗಾಗಿ ಎಷ್ಟೋ ಒಳ್ಳೆಯ ಯೋಜನೆಗಳು ಜನರಿಗೆ ತಲುಪುವುದಿಲ್ಲ. ಕೆಲವರು ಮಾತ್ರ ಉತ್ತಮವಾಗಿ ಕೆಲಸ ಮಾಡುತ್ತಾರೆ.

ಕೊಪ್ಪಳದ ಅಂಚೆ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಅತಿ ಹೆಚ್ಚು ಖಾತೆ ಮಾಡಿಸಿ ರಾಷ್ಟ್ರಮಟ್ಟದಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ಅಂಚೆ, ಬ್ಯಾಂಕಿಂಗ್ ಹಾಗೂ ವಿಮಾ ಸೌಲಭ್ಯ ಅಂಚೆ ಕೇರಿಯಲ್ಲಿ ಸಿಗುತ್ತಿದೆ ಎಂದರು.

ಕೊಪ್ಪಳ ವಿವಿ ಕುಲಪತಿ ಬಿ.ಕೆ.ರವಿ ಮಾತನಾಡಿ, ಅಂಚೆ ಇಲಾಖೆಯಿಂದಲೇ ನಾವೆಲ್ಲ ಸಂವಹನ ಆರಂಭಿಸಿದ್ದೇವೆ. ಹಿಂದೆ ಸುದ್ದಿ ಸಮಾಚಾರಗಳನ್ನು ತಿಳಿಸುತ್ತಿದ್ದದ್ದು ಅಂಚೆ ಪತ್ರಗಳೇ. ನಮ್ಮ ಕಾಲದ ಎಲ್ಲರಿಗೂ ಅಂಚೆ ಇಲಾಖೆ ನಂಟಿದೆ. ನಮ್ಮ ತಾತನೂ ಇಲಾಖೆ ನೌಕರನಾಗಿದ್ದ. ನಾನೂ ಪತ್ರಿಕೋದ್ಯಮದಿಂದ ಬಂದ ಕಾರಣ ಆರಂಭದಲ್ಲಿ ಅಂಚೆ ಮೂಲಕವೇ ನಮ್ಮ ಸುದ್ದಿಗಳು ಸುದ್ದಿ ಮನೆ ಸೇರುತ್ತಿದ್ದವು ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ, ಅಂಚೆ ವಿಭಾಗ ಅಧಿಕಾರಿ ಎನ್.್ಜಜಿ.ಭಂಗೀಗೌಡರ ಮಾತನಾಡಿದರು. ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಸಾರ್ವಜನಿಕರು ಅನಿಸಿಕೆ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣಾ ಉಕ್ಕುಂದ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್, ಪ್ರಮುಖರಾದ ಮಂಜುಳಾ ಕರಡಿ, ಮಹಾಲಕ್ಷ್ಮೀ ಕಂದಾರಿ, ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ, ಅಡಿವೆಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net