ನೃತ್ಯರೂಪಕದಲ್ಲಿ ದೈವಕ್ಕೆ ಅಪಚಾರ - ಕಾಲೇಜು ದಶಮಾನೋತ್ಸವದಲ್ಲಿ ಘಟನೆ

IMG-20250324-WA0023
Published on

ಪುತ್ತೂರು: ಖಾಸಗಿ ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆಸಿದ ನೃತ್ಯರೂಪಕದಲ್ಲಿ ತುಳುನಾಡಿನ ಸಂಸ್ಕೃತಿಗೆ ಅವಹೇಳನ ನಡೆಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

ನೃತ್ಯ ರೂಪಕದಲ್ಲಿ ಧೂಮಾವತಿ (ಜುಮಾದಿ) ದೈವದ ವೇಷವನ್ನು ಧರಿಸಿ ಮಾತುಗಳಿಗೆ ಹೆಜ್ಜೆ ಹಾಕಿರುವ ದೃಶ್ಯ ವೈರಲ್ ಆಗಿದೆ. ವೇದಿಕೆಗಳಿಗೆ ದೈವಾರಾಧನೆಯ ಪದ್ಧತಿಗಳು ಹೋಗಬಾರದೆಂಬ ಚರ್ಚೆಯಾಗುತ್ತಿರುವಾಗಲೇ ಈ ನಡುವೆ ವಿದ್ಯಾರ್ಥಿಗಳಿಂದ ವೇಷಧರಿಸಿ ನಾಟಕ ಮಾಡಿಸಲು ಮುಂದಾಗಿರುವುದು ಜನರ ಭಾವನೆಗೆ ಧಕ್ಕೆಯಾಗಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಲ್ಲಿಯೇ ಆರಾಧನಾ ಪದ್ಧತಿಯನ್ನು ವೇದಿಕೆಯಲ್ಲಿ ನಡೆಸಿ ದುರಂಹಕಾರ ತೋರಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net