ದೈವಜ್ಞ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್ ಶೇ.10 ಡಿವಿಡೆಂಟ್ ಘೋಷಣೆ.

IMG-20230910-WA0121
Published on

ಮಂಗಳೂರು: ದೈವಜ್ಞ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ 2022 - 2023 ನೇ ವಾರ್ಷಿಕ ಸಾಮಾನ್ಯ ಸಭೆಯು ಎಂ. ಅಶೋಕ್ ಶೇಟ್ ಅವರ ಅಧ್ಯಕ್ಷತೆಯಲ್ಲಿ ದೈವಜ್ಞ ಕಲ್ಯಾಣ ಮಂಟಪದಲ್ಲಿ ಜರುಗಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಸಂತೋಷ್ ಶೇಟ್ ವಾರ್ಷಿಕ ವರದಿ ಮಂಡಿಸಿದರು.
2022 - 2023 ನೇ ಸಾಲಿನಲ್ಲಿ ಸಂಘವು 33.77 ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಿಸಲಾಯಿತು. ಸಂಘವು 65.34 ಲಕ್ಷ ರೂ. ಪಾಲು ಬಂಡವಾಳ, 18.27 ಕೋಟಿ ರೂ. ಠೇವಣಿ ಹೊಂದಿದ್ದು, ಸದಸ್ಯರಿಗೆ 12.54 ಕೋಟಿ ರೂ. ಸಾಲ ನೀಡಿದೆ. ಸಂಘವು 2022 - 2023 ನೇ ಸಾಲಿನಲ್ಲಿ 89.35 ಕೋಟಿ ರೂ.ವ್ಯವಹಾರ ನಡೆಸಿದೆ. ಸಂಘವು ಸತತವಾಗಿ ’ಎ’ ತರಗತಿಯ ಆಡಿಟ್ ವರ್ಗಿಕರಣ ಪಡೆಯುತ್ತಾ ಬಂದಿದೆ.
2022 - 2023 ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಸದಸ್ಯರ ಮಕ್ಕಳನ್ನು  ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.  
ಸಂಘದ ನಿರ್ದೇಶಕರಾದ ಎಸ್.ರಮಾನಂದ ಶೇಟ್, ಕೆ.ಸುಧಾಕರ್ ಶೇಟ್, ಮನೋಹರ್ ಶೇಟ್, ಶ್ರೀಪಾದ್ ಬಿ. ರಾಯ್ಕರ್, ಗುರುಪ್ರಸಾದ್ ಶೇಟ್, ಗಜೇಂದ್ರ ಶೇಟ್, ಪುಷ್ಪ  ಕೆ.ಶೇಟ್, ಸುಭದ್ರಾ ಬಾಯಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net