

ಹುಬ್ಬಳ್ಳಿ : ನಗರದ ದೈವಜ್ಞ ಬ್ರಾಹ್ಮಣ ಸುವರ್ಣಕಾರ ಕೋ-ಆಪ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಮಂಡಳಿ ಚುನಾವಣೆ ಇಲ್ಲಿನ ಸಿಬಿಟಿ ಹೊಸಕಿಲ್ಲಾದ 3ನೇ ಕ್ರಾಸ್ನ ಶ್ರೀನಿಧಿ ಅನೆಕ್ಸ್ನ ಮೊದಲ ಮಹಡಿಯಲ್ಲಿನ ಸೊಸೈಟಿ ಕಚೇರಿಯಲ್ಲಿ ಸೆ. 20ರಂದು ನಡೆಯಲಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಚುನಾವಣೆ ಅಭ್ಯರ್ಥಿ ಸತೀಶ ಶೇಜವಾಡಕರ, ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಸಾಮಾನ್ಯ ವರ್ಗದ 7 ಸ್ಥಾನಗಳಿಗೆ ಆನಂದ ರಾಯ್ಕರ್, ಮಹೇಶ ಶೇಟ್, ಮಂಜುನಾಥ ವೆರ್ಣೆಕರ, ಮಂಜುನಾಥ ಪಾಲನಕರ, ವಿಷ್ಣು ರಾಯ್ಕರ, ಶ್ರೀಪಾದ ರೇವಣಕರ ಹಾಗೂ ನಾನು (ಸತೀಶ ಶೇಜವಾಡಕರ) ಮತ್ತು ಅ ವರ್ಗದ ಮೀಸಲು ಸ್ಥಾನಕ್ಕೆ ಅಮೃತ ಜನ್ನು ಅವರು ಸ್ಪರ್ಧಿಸಿದ್ದಾರೆ ಎಂದು ತಿಳಿಸಿದರು.
ಒಟ್ಟು 10 ಅಭ್ಯರ್ಥಿಗಳ ಪೈಕಿ ಪ್ರೇಮಾ ಭಟ್ ಹಾಗೂ ಶೈಲಾ ಶೇಟ್ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. 1,875 ಶೇರುದಾರರು ಇದ್ದು, 1,475 ಶೇರುದಾರರು ಮತದಾನಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ನಮ್ಮ ಅವಧಿಯಲ್ಲಿ ಪ್ರತಿಭಾವಂತ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ಕಾಲರ್ಶಿಪ್ ನೀಡಿದ್ದೇವೆ. ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರಿಗೆ ಮಾಸಾಶನ ನೀಡಲಾಗಿದೆ. ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದ್ದಾಗಿ ತಿಳಿಸಿದರು.
ಪ್ರೇಮಾ ಭಟ್, ಮಂಜುನಾಥ ವೆರ್ಣೆಕರ, ಶೈಲಾ ಭಟ್, ವಿಷ್ಣು ರತ್ನಾಕರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.