ಹೈನುಗಾರಿಕೆಯಿಂದ ಆರ್ಥಿಕ ಲಾಭ ಸಾಧ್ಯ ಎಂದ ಸಿರಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ

110622 Siraguppa A program to issue checks to the Women's Union
ಸಿರಗುಪ್ಪ ತಾಪಂ ಕಚೇರಿ ಆವರಣದಲ್ಲಿ ಮಹಿಳಾ ಒಕ್ಕೂಟಕ್ಕೆ ಸಾಂಕೇತಿಕವಾಗಿ ಚೆಕ್ ವಿತರಿಸುವ ಕಾರ್ಯಕ್ರಮವನ್ನು ಶಾಸಕ ಎಂ.ಎಸ್.ಸೋಮಲಿಂಗಪ್ಪ ಶನಿವಾರ ಉದ್ಘಾಟಿಸಿದರು.
Published on

ಸಿರಗುಪ್ಪ: ಮಹಿಳೆಯರ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ. ಮಹಿಳಾ ಸ್ವಸಹಾಯ ಸಂಘಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ಅರ್ಥಿಕ ಸಹಾಯ ಮಾಡುವ ಜತೆಗೆ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದ್ಬಳಕೆಯಾಗಲಿ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ನಗರದ ತಾಪಂ ಕಚೇರಿ ಆವರಣದಲ್ಲಿ ಶನಿವಾರ ರಾರಾವಿ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟಕ್ಕೆ ಸಾಂಕೇತಿಕವಾಗಿ 24 ಲಕ್ಷ ರೂ. ಮೌಲ್ಯದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಸಹಾಯ ಗುಂಪುಗಳ ಸದಸ್ಯರು ದೊಡ್ಡ ಮೊತ್ತದ ಹಣದಿಂದ ನಿಮ್ಮ ವ್ಯಾಪ್ತಿಯಲ್ಲಿ ಸರಿಹೊಂದುವ ಸಣ್ಣ ಕೈಗಾರಿಕೆ, ಹೈನುಗಾರಿಕೆ ನಡೆಸುವುದರಿಂದ ಆರ್ಥಿಕ ಲಾಭ ಗಳಿಸಬಹುದಾಗಿದೆ. ಇದಕ್ಕೆ ಬೇಕಾಗುವ ತರಬೇತಿಗೆ ತಾಪಂ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸುತ್ತಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ, ತಾಪಂ ಇಒ ಎಂ.ಬಸಪ್ಪ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ನಜೀರ್‌ಅಹಮದ್, ಡಿವೈಎಸ್‌ಪಿ ಸತ್ಯನಾರಾಯಣರಾವ್, ನರೇಗಾ ಯೋಜನಾಧಿಕಾರಿ ರಾಜೇಶ್ವರಿ, ತಾಪಂ ವ್ಯವಸ್ಥಾಪಕಿ ಸುಜಾತಾ, ಮುಖಂಡರಾದ ಅನಿಲ್‌ನಾಯ್ಡು, ಡಿ.ಸೋಮಪ್ಪ, ಎಚ್.ಬಿ.ಗಂಗಪ್ಪ, ಎಂ.ವೀರೇಶ, ಎಂ.ಕೋಟೇಶ್ವರರೆಡ್ಡಿ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net