ಡೇರಿ ಕಾರ್ಯದರ್ಶಿಗಳ ಗುಜರಾತ್ ಪ್ರವಾಸ ಆರಂಭ

26-pnp 5
ಪಾಂಡವಪುರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ತರಬೇತಿ ಮತ್ತು ಅಧ್ಯಯನದ ಒಂದು ವಾರದ ಗುಜರಾತ್ ರಾಜ್ಯ ಪ್ರವಾಸಕ್ಕೆ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸೋಮವಾರ ಹಸಿರು ನಿಶಾನೆ ತೋರಿಸುವ ಮೂಲಕ ಬೀಳ್ಕೊಟ್ಟರು. ಆರ್.ಪ್ರಸಾದ್, ಎಚ್.ಎನ್.ಉಷಾ, ಜಗದೀಶ್ ಇತರರು ಇದ್ದರು.
Published on

ಪಾಂಡವಪುರ: ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ತರಬೇತಿ ಮತ್ತು ಅಧ್ಯಯನದ ಒಂದು ವಾರದ ಗುಜರಾತ್ ರಾಜ್ಯ ಪ್ರವಾಸಕ್ಕೆ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸೋಮವಾರ ಹಸಿರು ನಿಶಾನೆ ತೋರಿ, ಬೀಳ್ಕೊಟ್ಟರು.


ಬಳಿಕ ಮಾತನಾಡಿ, ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು ಹಾಲಿನ ಉತ್ಪಾದನೆ, ಗುಣಮಟ್ಟ ಹಾಗೂ ಡೇರಿ ನಿರ್ವಹಣೆ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಹೆಚ್ಚಿನ ಅನುಭವ ಪಡೆಯಲಿ ಎಂಬ ಉದ್ದೇಶದಿಂದ ಸುಮಾರು 45 ಕಾರ್ಯದರ್ಶಿಗಳ ಎರಡನೇ ತಂಡವನ್ನು ಗುಜರಾತ್ ಪ್ರವಾಸಕ್ಕೆ ಕಳುಹಿಸಿ ಕೊಡಲಾಗುತ್ತಿದೆ. ಹಿಂದೆಯೂ ರೈತರು ಮತ್ತು ಕಾರ್ಯದರ್ಶಿಗಳ ಒಂದು ತಂಡ ಗುಜರಾತ್ ಪ್ರವಾಸ ಮುಗಿಸಿ ಸಾಕಷ್ಟು ಅಧ್ಯಯನದೊಂದಿಗೆ ಹಿಂತಿರುಗಿದ್ದರು. ಈಗ ಎರಡನೇ ತಂಡ ತೆರಳುತ್ತಿದೆ. ಗುಜರಾತ್ ರಾಜ್ಯ ಹೈನುಗಾರಿಕೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಅಲ್ಲಿನ ಹೈನುಗಾರಿಕೆ ವಿಚಾರಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ.ಪ್ರವಾಸದಿಂದ ಕಾರ್ಯದರ್ಶಿಗಳಿಗೆ ಹೈನುಗಾರಿಕೆ ಬಗ್ಗೆ ಹೆಚ್ಚಿನ ಜ್ಞಾನ ಸಿಗಲಿದೆ ಎಂದರು.


ಗುಜರಾತಿನ ಎನ್‌ಡಿಡಿಬಿ ಎಂಬ ಸಂಸ್ಥೆ ಹೈನುಗಾರಿಕೆ ವಿಚಾರವಾಗಿ ಕಾರ್ಯದರ್ಶಿಗಳಿಗೆ ತರಬೇತಿ ನೀಡುತ್ತಿದೆ. ಕಾರ್ಯದರ್ಶಿಗಳು ತರಬೇತಿಯೊಂದಿಗೆ ಅಧ್ಯಯನ ನಡೆಸಿ ಏನಾದರೂಂದು ಬದಲಾವಣೆಯೊಂದಿಗೆ ಇಲ್ಲಿನ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ನಮ್ಮ ಆಶಯ. ಪ್ರವಾಸದ ಬಳಿಕ ಹಾಲು ಉತ್ಪಾದಕರಿಗೆ ಹೈನುಗಾರಿಕೆ ಬಗ್ಗೆ ಸೂಕ್ತ ಮಾಹಿತಿ ನೀಡುವ ಜತೆಗೆ ಹಾಲಿನ ಗುಣಮಟ್ಟ ಕಾಯ್ದುಕೊಂಡು ರೈತರಿಗೆ ಹೆಚ್ಚಿನ ದರ ಸಿಗುವ ನಿಟ್ಟಿನಲ್ಲಿ ಕೆಲಸ ನಿರ್ವಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗವಿಸ್ತರಣಾಧಿಕಾರಿಗಳಾದ ಎಚ್.ಎನ್.ಉಷಾ, ಜಗದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net