ಹೈನುಗಾರಿಕೆ ಲಾಭದಾಯಕ

23 Jaggu 9
Published on

ಬೆಳಗಾವಿ: ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಕೆಎಲ್​ಇ&ಕೃಷಿ ವಿಜ್ಞಾನ ಕೇಂದ್ರ ಹಾಗೂ ಹೆಸರಟ್ಟದ ಪಶುಪಾಲನಾ ಶ್ರೇಷ್ಠತಾ ಕೇಂದ್ರದ ಸಹಯೋಗದಲ್ಲಿ ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ಆಯೋಜಿಸಿದ್ದ ಮೂರು ದಿನದ ವೈಜ್ಞಾನಿಕ ಪಶುಪಾಲನಾ ಪದ್ಧತಿ ತರಬೇತಿ ಸಮಾರೋಪ ಗುರುವಾರ ಜರುಗಿತು.

ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಹೊಳಬಸಪ್ಪ ತೆಗ್ಗಿ ಮಾತನಾಡಿ, ತರಬೇತಿ ಪಡೆದ ರೈತರು ವೈಜ್ಞಾನಿಕವಾಗಿ ಹೈನುಗಾರಿಕೆಯಿಂದ ಉತ್ತಮ ಲಾಭ ಪಡೆಯಬಹುದು ಎಂದರು.  ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ ವಿ.ಎನ್​. ಮಾತನಾಡಿ, ಪಶುಗಳಿಗೆ ಗುಣಮಟ್ಟದ ಆಹಾರ ನೀಡಬೇಕು. ಜಂತು ನಿವಾರಕ ಔಷಧಿ ಹಾಗೂ ಕೃತಕ ಗರ್ಭಧಾರಣೆ ಸೇರಿ ಹಲವು ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ವಿಸ್ತರಣಾ ನಿರ್ದೇಶಕ ಡಾ. ಪಿ.ಎಸ್​. ಹೂಗಾರ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಲ್ಲಿ ದೊರೆಯುವ ಸೌಲಭ್ಯ ಬಳಸಿಕೊಳ್ಳಬೇಕು. ಸುಧಾರಿತ ಮೇವಿನ ತಳಿಗಳ ಬೀಜಗಳು ಹಾಗೂ ಸಸಿಗಳನ್ನು ರೈತರು ಕೇಂದ್ರದಿಂದ ಪಡೆಯುವಂತೆ ಕೋರಿದರು. ಕೇಂದ್ರವು ಕೆಎಂಎಫ್​ ಸಂಸ್ಥೆಯೊಂದಿಗೆ ಹಲವು ತರಬೇತಿ ಹಮ್ಮಿಕೊಳ್ಳಲು ಉತ್ಸುಕವಾಗಿದೆ ಎಂದರು. ಜಿಲ್ಲೆಯ 40 ಹೈನುಗಾರರು ಭಾಗವಹಿಸಿದ್ದರು. ಬೇಸಾಯ ಶಾಸ ವಿಜ್ಞಾನಿ ಜಿ.ಬಿ. ವಿಶ್ವನಾಥ, ತೋಟಗಾರಿಕಾ ವಿಜ್ಞಾನಿ ಪ್ರವಿಣ ಯಡಹಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net