ಸದೃಢ ಬದುಕಿಗೆ ಹೈನುಗಾರಿಕೆ ಸಹಕಾರಿ

04-kkr2(9-24 manmul
ಕಿಕ್ಕೇರಿ ಸಮೀಪದ ಕರೋಟಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಬುಧವಾರ ನಡೆಯಿತು. ಡಾಲು ರವಿ, ಭಾವನಾ, ರತ್ನಮ್ಮ, ಲಕ್ಷ್ಮೀದೇವಮ್ಮ, ಶಿವಮ್ಮ, ಮಂಜುಳಾ ಇದ್ದರು.
Published on

ಕಿಕ್ಕೇರಿ: ಮನ್ಮುಲ್ ಹಾಗೂ ಹಾಲು ಸಹಕಾರ ಉತ್ಪಾದಕರ ಸಂಘ ನಾಣ್ಯದ ಎರಡು ಮುಖವಾಗಿದ್ದು , ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ತಿಳಿಸಿದರು.


ಸಮೀಪದ ಕರೋಟಿ ಗ್ರಾಮದಲ್ಲಿ ಬುಧವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಏರ್ಪಡಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸದೃಢ ಬದುಕಿಗೆ ಹೈನುಗಾರಿಕೆ ಸಹಕಾರಿಯಾಗಿದೆ. ವಾರ್ಷಿಕ ಸಭೆಯಲ್ಲಿ ಸಂಘದ ಆಡಳಿತ, ಲೆಕ್ಕಪತ್ರಗಳನ್ನು ಪ್ರಶ್ನಿಸುವ ಹಾಗೂ ಸಲಹೆಗಳನ್ನು ನೀಡುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಭಿನ್ನಾಭಿಪ್ರಾಯವಿಲ್ಲದೆ ಸಕಾರಾತ್ಮಕವಾಗಿ ಚಿಂತನೆ ಮಾಡಿ. ಸಮಸ್ಯೆಗಳಿದ್ದರೆ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.


ಒಕ್ಕೂಟದಿಂದ ರಿಯಾಯಿತಿ ದರದಲ್ಲಿ ಸರಬರಾಜು ಮಾಡುವ ಪೋಷಕಾಂಶವುಳ್ಳ ಪಶು ಆಹಾರ, ಖನಿಜ ಮಿಶ್ರಣ ಆಹಾರವನ್ನು ಗ್ರಾಹಕರು ಖರೀದಿಸಿ ಪಶುಗಳ ಆರೋಗ್ಯ, ಹೆಚ್ಚಿನ ಹಾಲಿನ ಇಳುವರಿಗೆ ಗಮನಹರಿಸಬೇಕು. ಒಕ್ಕೂಟದಿಂದ ಸಿಗುವ ಸೌಲಭ್ಯ ಪಡೆಯಬೇಕು ಎಂದರು.

ಮಾರ್ಗ ವಿಸ್ತರಣಾಧಿಕಾರಿ ಭಾವನಾ, ಅಧ್ಯಕ್ಷೆ ರತ್ನಮ್ಮ ದಿನೇಶ್, ಉಪಾಧ್ಯಕ್ಷೆ ಲಕ್ಷ್ಮೀ ದೇವಮ್ಮ, ನಿರ್ದೇಶಕರಾದ ರತ್ನಮ್ಮ, ಶಿವಮ್ಮ, ವಿಶಾಲಾಕ್ಷಿ, ಮಂಜುಳಾ, ರಾಧಾ, ಗಿರಿಜಾ, ಶಾಂತಮ್ಮ, ಮಂಜುಳಾ, ನಂಜಮ್ಮ, ಶಕುಂತಲಾ, ಗ್ರಾಪಂ ಸದಸ್ಯ ಅನಿಲ್, ಕಾರ್ಯದರ್ಶಿ ಎಂ.ಎಸ್.ಮಂಜುಳಾ, ಹಾಲು ಪರೀಕ್ಷಕಿ ನಾಗಮ್ಮ ಪಾಪೇಗೌಡ, ಮುಖಂಡರಾದ ಹುಚ್ಚೇಗೌಡ, ಡೇರಿ ರಾಜಶೇಖರ್, ಕರೋಟಿ ತಮ್ಮೇಗೌಡ, ಗುಂಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net