ರೈತರ ಅರ್ಥಿಕ ನಿರ್ವಹಣೆಗೆ ಹೈನುಗಾರಿಕೆ ಸಹಕಾರಿ

27, srinivaspur photo-1
Published on

ಶ್ರೀನಿವಾಸಪುರ: ರೈತರ ಕುಟುಂಬ ಆರ್ಥಿಕ ನಿರ್ವಹಣೆಗೆ ಸಹಕಾರಿಯಾಗುತ್ತಿರುವ ಹೈನುಗಾರಿಕೆಯತ್ತ ಹೆಚ್ಚು ಗಮನಹರಿಸಬೇಕು ಎಂದು ಕೋಮುಲ್​ ನಿರ್ದೇಶಕ ಎನ್​.ಹನುಮೇಶ್​ ತಿಳಿಸಿದರು.

ತಾಲೂಕಿನ ಗಾಂಡ್ಲಹಳ್ಳಿಯ ಹಾಲು ಉತ್ಪಾದಕರ ಕೇಂದ್ರದಲ್ಲಿ ಭಾನುವಾರ ಸಾಮೂಹಿಕ ಹಾಲು ಕರೆಯುವ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸದ್ಯ ಶೇ.80 ಹಸುಗಳನ್ನು ಮಾರಾಟ ಮಾಡಿದ್ದು, ಕೋಮುಲ್​ನಿಂದ ಹಸುಗಳನ್ನು ಖರೀದೀಸಲು ಸಾಲ ಕೊಡುವುದಿಲ್ಲ. ಆದರೆ, ಕೋಮುಲ್​ನಿಂದ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲು ಸಹಾಯ ಮಾಡಲಾಗುತ್ತದೆ ಎಂದರು.

ಗ್ರಾಮದ ಡೇರಿಗೆ ಹಾಲು ಕರೆಯುವ ಯಂತ್ರ ನೀಡಲಾಗಿದೆ. ಪ್ರಸ್ತುತ ಯುವ ಜನಾಂಗದವರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದು, ಇದರಿಂದ ಹಸುಗಳನ್ನು ಮಾರುತ್ತಿದ್ದು, ಹಾಲು ಉತ್ಪಾದನೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಲು ಕರೆಯುವ ಯಂತ್ರವನ್ನು ಡೇರಿಗೆ ನೀಡಲಾಗಿದೆ ಎಂದರು.

ಹಸುವಿನ ಕೆಚ್ಚಲಿನಲ್ಲಿ ಹಾಲು ಉಳಿಯುವದರಿಂದ ಹಸುವಿಗೆ ತೊಂದರೆ ಆಗುತ್ತದೆ. ಹಾಲು ಕರೆಯುವ ಯಂತ್ರದಿಂದ ಸಂಪೂರ್ಣ ಕಾಲು ಕರೆಯುತ್ತದೆ. ಸದ್ಯ ಕೋಮುಲ್​ನಿಂದ ಹಸು ಮ್ಯಾಟ್​, ಚಾಪ್​ಕಟರ್​ಗಳನ್ನು ನೀಡಲಾಗುತ್ತಿದೆ. ಈ ಎಲ್ಲ ಸೌಲಭ್ಯಗಳಿಂದ ಹಾಲು ಉತ್ಪಾದನೆಗಾಗಿ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಹಾಲು ಉತ್ಪಾದನೆಗೆ ಹೆಚ್ಚು ಹೆಚ್ಚು ಉತ್ಪಾದನೆ ಮಾಡಿ ಗುಣಮಟ್ಟದ ಹಾಲನ್ನು ಡೇರಿಗೆ ಹಾಕುವಂತೆ ಮನವಿ ಮಾಡಿದರು.

ಬೆಂಗಳೂರು ಡೇರಿ ವ್ಯವಸ್ಥಾಪಕ ವೆಂಕಟೇಶ್​ಪ್ರಸಾದ್​ ಮಾತನಾಡಿ, ರೈತರು ಕೃಷಿ ಜತೆಗೆ ಉಪ ಕಸುಬು ಕೈಗೊಂಡರೆ ರೈತರು ಆರ್ಥಿಕ ಸ್ವಾವಲಂಭಿಗಳಾಗಬಹುದು. ರೈತರು ಡೇರಿಗೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವಂತೆ ಮನವಿ ಮಾಡಿದರು.

ಡೇರಿ ಅಧ್ಯಕ್ಷ ಬಿ.ಎನ್​.ರಾಜಕುಮಾರ್​, ನಿರ್ದೇಶಕರಾದ ಶ್ರೀನಿವಾಸ್​, ನಾಗಭೂಷನ್​, ಕಾರ್ಯದರ್ಶಿ ಶ್ರೀನಿವಾಸ್​, ವಿಸ್ತರಾಣಾಧಿಕಾರಿಗಳಾದ ನರಸಿಂಹರಾಜು, ಶಂಕರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net