ಹೈನುಗಾರರಿಗೆ ಗೌರವಾರ್ಪಣೆ

honur
ಮಂದಾರ್ತಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸುವರ್ಣ ಮಹೋತ್ಸವದಲ್ಲಿ ಉಡುಪಿ ಜಿಲ್ಲೆಯಲ್ಲಿ ಒಕ್ಕೂಟಕ್ಕೆ ಅತ್ಯಧಿಕ ಹಾಲು ನೀಡುತ್ತಿರುವ ಹೈನುಗಾರರನ್ನು ಸನ್ಮಾನಿಸಲಾಯಿತು.
Published on

ಕೊಕ್ಕರ್ಣೆ: ಮಂದಾರ್ತಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸುವರ್ಣ ಮಹೋತ್ಸವದಲ್ಲಿ ಉಡುಪಿ ಜಿಲ್ಲೆಯಲ್ಲಿ ಒಕ್ಕೂಟಕ್ಕೆ ಅತ್ಯಧಿಕ ಹಾಲು ನೀಡುತ್ತಿರುವ ಹೈನುಗಾರರಾದ ಪ್ರಕಾಶ್ಚಂದ್ರ ಶೆಟ್ಟಿ ಮೇಕೋಡ್, ವಸಂತಿ ಎಂ.ಶೆಟ್ಟಿ ಹುಣ್ಸೆಮಕ್ಕಿ, ಜಲೀಲಾ ಎನ್.ನಾವುಂದ, ಜಗನ್ನಾಥ ಪೂಜಾರಿ ಹುಣ್ಸೆಮಕ್ಕಿ, ಸಂತೋಷ್ ಗೌಡ ಮೇಕೋಡ್, ರಾಮಕೃಷ್ಣ ಭಟ್ ಮಿಯ್ಯರು, ಪ್ರವೀಣ್ ಪೂಜಾರಿ ಸಿದ್ದಾಪುರ, ಚೈತ್ರಾ ಅಡಪ ಕೈಲ್ಕೆರೆ, ಸಿ.ಕೆ.ನೀಲಕಂಠ ಅಡಿಗ ಆವರ್ಸೆ, ಸಾಧು ಕುಲಾಲ್ ಶಿವಪುರ ಅವರನ್ನು ಸನ್ಮಾನಿಸಲಾಯಿತು.

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ಮಂಗಳೂರು ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಮಂದಾರ್ತಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎಚ್.ವಿಠಲ ಶೆಟ್ಟಿ ಶೇಡಿಕೊಡ್ಲು, ಮಂಗಳೂರು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ಮಾಜಿ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಕೊಡವೂರು, ಜಗದೀಶ ಕಾರಂತ, ವ್ಯವಸ್ಥಾಪಕ ನಿರ್ದೇಶಕ ವಿವೇಕ ಡಿ., ವ್ಯವಸ್ಥಾಪಕ ಡಾ.ರವಿರಾಜ್ ಉಡುಪ, ಬೆಂಗಳೂರು ಕರ್ನಾಟಕ ಹಾಲು ಮಹಾಮಂಡಲ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಿಶ್ರಾಂತ ಕಾರ್ಯನಿರ್ವಾಹಕ ಡಾ.ಎಲ್.ಎಚ್.ಮಂಜುನಾಥ, ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ ಆನುವಂಶಿಕ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಮಂದಾರ್ತಿ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಚ್.ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net