ಚಿಕ್ಕಮುದ್ದೇನಹಳ್ಳಿ ಡೇರಿ ಸಂಘಕ್ಕೆ ಆಯ್ಕೆ

TUBAGERE CHIKKAMUDDANAHALLY DARY
ದೊಡ್ಬಳ್ಳಾಬಪುರ ತಾಲೂಕು ಚಿಕ್ಕಮುದ್ದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆದಿ ನಾರಾಯಣಸ್ವಾಮಿ, ಉಪಾಧ್ಯಕ್ಷ ರಂಗಪ್ಪ ಅವರನ್ನು ಕೆಪಿಸಿಸಿ ಸದಸ್ಯ ಎಸ್.ಆರ್. ಮುನಿರಾಜ್ ಸನ್ಮಾನಿಸಿದರು.ಚುನಾವಣೆ ಅಧಿಕಾರಿ ಶಿವಕುಮಾರ್, ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂಜಮ್ಮ ನರಸಿಂಹಮೂರ್ತಿ, ಮಾಜಿ ಸದಸ್ಯ ಬಾಲಕೃಪ್ಣಪ್ಪ, ಅಶ್ವತಪ್ಪ, ವೆಂಕಟರಮಣಪ್ಪ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಚಿಕ್ಕಮುದ್ದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಅದಿನಾರಾಯಣಸ್ವಾಮಿ, ಉಪಾಧ್ಯಕ್ಷರಾಗಿ ರಂಗಪ್ಪ ಅವಿರೋಧ ಅಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದ ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜ್ ಮಾತನಾಡಿ, ಎಲ್ಲ ನಿರ್ದೇಶಕರನ್ನು ಒಗ್ಗೂಡಿಸಿಕೊಂಡು ರೈತರ ಸಮ್ಮುಖದಲ್ಲಿ ಸಂಘವನ್ನು ಬೆಳೆಸಬೇಕಾಗಿದೆ, ತಂತ್ರಜ್ಞಾನ ಮುಂದುವರಿದಂತೆ ತಾಂತ್ರಿಕತೆ ಅಳವಡಿಸಿಕೊಂಡು ವೈಜ್ಞಾನಿಕವಾಗಿ ರಾಸುಗಳನ್ನು ಪೋಷಿಸಿ ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ರೈತರಿಗೂ ಲಾಭ, ಸಂಘವೂ ಉಳಿಯುತ್ತದೆ. ರೈತರು ಜೀವನೋಪಾಯಕ್ಕೆ ಹೈನುಗಾರಿಕೆಯನ್ನು ಮುಖ್ಯ ಕಸುಬಾಗಿಸಿಕೊಂಡು ಸುಗಮ ಜೀವನ ಸಾಗುತ್ತಿದ್ದಾರೆ, ಉತ್ತಮ ತಳಿಯ ರಾಸುಗಳ ತಂದು ಗುಣಮಟ್ಟದ ಹಾಲು ಪೂರೈಸಿದರೆ ಒಳ್ಳೆಯ ಲಾಭಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದರು.
ತೂಬಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ವಿ.ವೆಂಕಟೇಶ್, ನೂತನ ನಿರ್ದೇಶಕರಾದ ಮುನಿಕೃಷ್ಣಪ್ಪ, ನಾಗರಾಜ್, ಸಿದ್ದಲಿಂಗಪ್ಪ, ಸಿ.ಬಿ.ನರಸಿಂಹಮೂರ್ತಿ,ನರಸಪ್ಪ,ರಾಮಪ್ಪ, ಕೃಷ್ಣಪ್ಪ, ನರಸಿಂಹಮೂರ್ತಿ, ನಾಗರತ್ನಮ್ಮ, ಪ್ರೇಮ, ರಂಗಮ್ಮ, ಕಾರ್ಯದರ್ಶಿ ಲಕ್ಷ್ಮಿಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net