ಹಾಲಿನ ಗುಣಮಟ್ಟ ಪಾಲನೆಗೆ ಆದ್ಯತೆ ನೀಡಿ

16BTP01
Published on

ಬೆಟ್ಟದಪುರ: ಡೇರಿಗಳು ಅಭಿವೃದ್ಧಿ ಹೊಂದಬೇಕು ಎಂದರೆ ಹಾಲು ಉತ್ಪಾದಕರ ಸಹಕಾರ ಮತ್ತು ಗುಣಮಟ್ಟ ಪಾಲನೆ ಪ್ರಮುಖವಾಗಿದೆ ಎಂದು ಮೈಮುಲ್ ವಿಸ್ತರಣಾಧಿಕಾರಿ ಶ್ರೀಕಾಂತ ಹೇಳಿದರು.

ಬೆಟ್ಟದಪುರ ಸಮೀಪದ ಚಿಕ್ಕನೇರಳೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಮೈಮುಲ್ನಿಂದ ನೀಡುವ ಪಶು ಆಹಾರ, ಖನಿಜ ಮಿಶ್ರಣವನ್ನು ಕಡ್ಡಾಯವಾಗಿ ಜಾನುವಾರುಗಳಿಗೆ ನೀಡಬೇಕು. ಹಸುಗಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೂ ಪಶು ವೈದ್ಯರು ಅಥವಾ ಡೇರಿ ಕಾರ್ಯದರ್ಶಿ ಗಮನಕ್ಕೆ ತರಬೇಕು. ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನೂ ಪ್ರತಿಯೊಬ್ಬ ಹೈನುಗಾರರೂ ಬಳಸಿಕೊಳ್ಳಬೇಕು. ಇದರಿಂದ ಗುಣಮಟ್ಟದ ಹಾಲು ಪೂರೈಕೆಗೆ ನೆರವಾಗಲಿದೆ. ಆ ಮೂಲಕ ಡೇರಿ ಅಧಿಕ ಲಾಭಗಳಿಸುವುದರೊಂದಿಗೆ ಅಭಿವೃದ್ಧಿಗೂ ಪೂರಕವಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ಸಿ.ವಿ ವೆಂಕಟೇಶ, ಉಪಾಧ್ಯಕ್ಷ ಸಿ.ರಾಜಶೇಖರ, ನಿರ್ದೇಶಕರರಾದ ಹನುಮೇಗೌಡ, ಸುಬ್ಬಣ್ಣ ಸಿ.ಜೆ, ಸಿದ್ದೇಗೌಡ, ಮಂಜುನಾಥ, ನಾಗನಾಯ್ಕ, ರೇವಣ್ಣ, ಅನಿತಾ, ಕಮಲಮ್ಮ, ರುಕ್ಮಿಣಿ, ಸಿಇಒ ಸಿ.ಟಿ ಮಧು, ಸಿಬ್ಬಂದಿಗಳಾದ ರಮೇಶ, ಸಿದ್ದಲಿಂಗನಾಯಕ ಸೇರಿದಂತೆ ಗ್ರಾಮದ ಮುಖಂಡರು ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net