

ಮಂಡ್ಯ: ತಾಲೂಕಿನ ದುದ್ದ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ ಆಯೋಜಿಸಲಾಗಿತ್ತು.
ಸಭೆ ಉದ್ಘಾಟಿಸಿ ಡೇರಿ ಅಧ್ಯಕ್ಷ ಡಿ.ಆರ್.ರಮೇಶ್ ಮಾತನಾಡಿ, ಸಂಘದ ಅಭಿವೃದ್ಧಿಗೆ ನಿರ್ದೇಶಕರು ಹಾಗೂ ಉತ್ಪಾದಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಮನ್‌ಮುಲ್ ವಿಸ್ತರಣಾಧಿಕಾರಿ ಡಾ.ಎ.ಎನ್.ಮಂಜೇಶ್‌ಗೌಡ, ಡೇರಿ ಉಪಾಧ್ಯಕ್ಷೆ ಲಲಿತಮ್ಮ, ಡಿ.ಎಂ.ರಾಮಚಂದ್ರು, ಕರೀಗೌಡ, ಜೋಗಿಗೌಡ, ಚನ್ನೇಗೌಡ, ಡಿ.ಪಿ.ರಾಜು, ಡಿ.ಎನ್.ರವಿ, ಪದ್ಮಾ, ರಾಜಮ್ಮ ಇತರರಿದ್ದರು. ಇದೇ ವೇಳೆ ಡಾ.ಸಹನಾ ಅವರನ್ನು ಅಭಿನಂದಿಸಲಾಯಿತು.