ಹುದುಗೂರು ಡೇರಿ ವಾರ್ಷಿಕ ಮಹಾಸಭೆ

dairy
Published on

ಕುಶಾಲನಗರ:

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಹುದುಗೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಕಾಂಚನ ದೇವಾನಂದ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಮಾತಾನಾಡಿ ಹುದುಗೂರು ಹಾಲು ಉತ್ಪಾದಕರ ಸಂಘದ ಕಟ್ಟಡ ಹಳೆಯದಾಗಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದ ವತಿಯಿಂದ ಅನುದಾನ ನೀಡಲಾಗುವುದು. ಮೊದಲು ಜಾಗದ ದಾಖಲೆ ಪತ್ರಗಳನ್ನು ಸರಿಪಡಿಸಿಕೊಂಡು ಆಡಳಿತ ಮಂಡಳಿಯ ತೀರ್ಮಾನದ ಮುಖೇನ ಪತ್ರವ್ಯವಹಾರ ಮಾಡಿದಲ್ಲಿ ನೂತನ ಕಟ್ಟಡದ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು. ಸದಸ್ಯರು ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಒಕ್ಕೂಟದ ವಿಸ್ತಾರಣಾಧಿಕಾರಿ ಬಿ.ಬಿ. ವೀಣಾ ಪಶುಪಾಲನೆಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಸಂಘವು ಈ ಸಾಲಿನಲ್ಲಿ ಲಾಭಾಂಶ ಗಳಿಸಿದ ಬಗ್ಗೆ ಅಧ್ಯಕ್ಷೆ ಕಾಂಚನ ದೇವಾನಂದ್ ಸಭೆಗೆ ತಿಳಿಸಿದರು.

ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್.ಎಸ್. ರವಿ, ರತ್ನಮ್ಮ, ಉಪಾಧ್ಯಕ್ಷೆ ರಶ್ಮಿ, ನಿರ್ದೇಶಕರಾದ ಜಮುನಾ, ಪುಟ್ಟಮ್ಮ, ರತ್ನಾ, ಲತಾ, ಪದ್ಮ, ಸುಮಾ, ಪುಷ್ಪವತಿ, ಶೀಲಾವತಿ, ಕಾರ್ಯದರ್ಶಿ ಜಾನಕಿ, ಹಾಲು ಉತ್ಪಾದಕ ಮಹಿಳಾ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net