

ಕುಶಾಲನಗರ:
ಕುಶಾಲನಗರ ತಾಲೂಕು ಕೂಡಿಗೆ ಸಮೀಪದ ಕೆರೆಕೇರಿ ಗ್ರಾಮದಲ್ಲಿ ನೂತನವಾಗಿ ಆರಂಭಿಸಲಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನೆಯನ್ನು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲೆ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಸೋಮವಾರ ನೆರವೇರಿಸಿದರು.
ನಂತರ ಮಾತಾನಾಡಿ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿಯಲ್ಲಿ ಸದಸ್ಯರು ತಮ್ಮ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಹಾಕುವ ಮೂಲಕ ಸಂಘದ ಅಭಿವೃದ್ಧಿ ಸಹಕರಿಸಬೇಕು. ಒಕ್ಕೂಟದ ವತಿಯಿಂದ ಸಹಕಾರ ಸಂಘಗಳಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ಸಂಘದ ಪ್ರಗತಿಗೆ ಸದಸ್ಯರುಗಳು ಮುಖ್ಯ ಕಾರಣಿಭೂತರಾಗಿರುತ್ತಾರೆ. ಸಂಘದ ಬೆಳವಣಿಗೆಗೆ ಅನುಕೂಲವಾಗುವಂತೆ ಒಕ್ಕೂಟದ ಸಹಯೋಗದೊಂದಿಗೆ ನೂತನ ಕಟ್ಟಡ ನಿರ್ಮಾಣ ಬೇಕಾಗುವ ಸವಲತ್ತುಗಳನ್ನು ನೀಡಲಾಗುವುದು. ಇದರ ಬಳಕೆಯ ಮೂಲಕ ಸಂಘದ ಅಭಿವೃದ್ಧಿ, ಮತ್ತು ಗ್ರಾಮದ ರೈತರ ಅರ್ಥಿಕ ಮಟ್ಟದ ಸುಧಾರಣೆ ಅನುಕೂಲಕಾರವಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಾಸನ ಡೇರಿ ಸಹಾಯಕ ನಿರ್ದೇಶಕ ಗಂಗಾಧರ ಮಾತಾನಾಡಿ ರೈತರ ಬದುಕಿಗೆ ಹೈನುಗಾರಿಕೆ ಮಹತ್ವಪೂರ್ಣವಾಗಿದೆ. ಇದಕ್ಕೆ ಪೂರಕವಾಗಿ ಸಮೀಪದಲ್ಲೇ ಹಾಲು ಉತ್ಪಾದಕರ ಸಹಕಾರ ಸಂಘಗಳು ಇರುವುದರಿಂದ ಅವುಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದರು.
ಹಾಲು ಉತ್ಪಾದಕರ ಸಂಘಗಳ ಕೊಡಗು ವಿಸ್ತಾಣಾಧಿಕಾರಿ ಬಿ.ವಿ. ವೀಣಾ ಮಾತನಾಡಿ ಹೈನುಗಾರಿಕೆ ಸಂಬAಧಿಸಿದAತೆ ಒಕ್ಕೂಟದ ವತಿಯಿಂದ ರೈತರಿಗೆ ಅನುಕೂಲವಾಗುವಂತೆ ಹಸುಗಳಿಗೆ ಚಿಕಿತ್ಸಾ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆರೆಕೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ರೇಖಾ ಪ್ರಸಾದ್, ಉಪಾಧ್ಯಕ್ಷೆ ಪ್ರೀತಿ ಪ್ರದೀಪ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಹಿರಿಯ ವಿಸ್ತಾರಣಾಧಿಕಾರಿ ಎಸ್. ಪಿ. ಗಂಗಾಧರ್, ಕೂಡಿಗೆ ಡೇರಿ ವ್ಯವಸ್ಥಾಪಕ ನಂದಿಶ್, ಸಹಾಯಕ ವ್ಯವಸ್ಥಾಪಕ ಎಂ. ವೇಣುಗೋಪಾಲ, ಸಂಘದ ಕಾರ್ಯದರ್ಶಿ ಮಂಜಳಾ ಹಾಗೂ ಸಂಘದ ನಿರ್ದೇಶಕರು ಇದ್ದರು.