ಹುಲುಸೆ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

dairy
Published on

ಕುಶಾಲನಗರ:

ಕುಶಾಲನಗರ ತಾಲೂಕು ಹುಲುಸೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹೆಚ್.ಎನ್. ಕಪನಪ್ಪ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ಬುಧವಾರ ನಡೆಯಿತು. ಸಂಘ 84 ಸದಸ್ಯರನ್ನು ಹೊಂದಿದ್ದು ಅತ್ಯಧಿಕ ಪ್ರಮಾಣದಲ್ಲಿ ಹಾಲು ಸಂಗ್ರಹ ಮಾಡುತ್ತಿದೆ.

ಸಂಘ ಪ್ರಸಕ್ತ ಸಾಲಿನಲ್ಲಿ 1.52 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಪ್ರಗತಿಯತ್ತ ದಾಪುಗಾಲಿಡುತ್ತಿದೆ. ಕಳೆದ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಘಧ 9/11 ದಾಖಲೀಕರಣ ಗೊಳಿಸಲಾಗಿದೆ ಎಂದು ಅಧ್ಯಕ್ಷ ಕಪನಪ್ಪ ಹೇಳಿದರು.

ಸಂಘಕ್ಕೆ ಅಧಿಕ ಪ್ರಮಾಣದಲ್ಲಿ ಹಾಲು ಪೂರೈಕೆ ಮಾಡುತ್ತಿರುವ ಸದಸ್ಯರಾದ ಹೆಚ್.ಬಿ. ಪ್ರಕಾಶ್, ಹೆಚ್.ಪಿ. ಸಾಗರ್, ಹೆಚ್.ಸಿ. ವಿಶ್ವನಾಥ್ ಅವರನ್ನು ಮಹಾಸಭೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಪುತ್ರಿ ಅಂಕಿತಾ, ರಮೇಶ್ ಪುತ್ರಿ ತೇಜಸ್ವಿನಿ ಅವರಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ಹಾಸನ ಹಾಲು ಒಕ್ಕೂಟದ ಕೊಡಗು ನಿರ್ದೇಶಕ ಕೆ.ಕೆ. ಹೇಮಂತಕುಮಾರ್ ಹಾಗೂ ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಈ ಸಂದರ್ಭ ಮಾತನಾಡಿದರು.

ಉಪಾಧ್ಯಕ್ಷ ಬಿ.ಡಿ. ಮಹದೇವ, ನಿರ್ದೇಶಕರಾದ ಆರ್.ಜಿ. ಮಹೇಶ್, ಹೆಚ್.ಎಸ್. ರಮೇಶ್, ಹೆಚ್.ಎಸ್. ಮಲ್ಲಿಕಾರ್ಜುನ, ಹೆಚ್.ಬಿ. ನಿಂಗಾನAದ, ಚನ್ನಬಸಪ್ಪ, ಹೆಚ್.ಬಿ. ಪ್ರಕಾಶ, ಹೃತಿಕ್, ಕಮಲಾಕ್ಷಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಸವಿತ, ಹಾಲು ಪರೀಕ್ಷಕಿ ಆಶಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net