ಗುಣಮಟ್ಟದ ಹಾಲು ಪೂರೈಸಿದರೆ ಸಂಘದ ಪ್ರಗತಿ

2
Published on

 ಬೈಲುಕುಪ್ಪೆ : ಗುಣಮಟ್ಟದ ಹಾಲು ಪೂರೈಸಿದಾಗ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅವರ್ತಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ. ಸಿ. ಶಿವಪ್ರಕಾಶ್ ಹೇಳಿದರು. ಸಂಘದ ಆವರಣದಲ್ಲಿ ಹಮ್ಮಿಕೊಂಡಿದ ದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಸಂಘವು ಪ್ರಸ್ತುತ ಸಾಲಿನಲ್ಲಿ 10. 21 ಲಕ್ಷ ರೂ ಲಾಭ ಗಳಿಸಿದೆ ಎಂದರು.

ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎಂ. ಅವಿನಾಶ ಮಾತನಾಡಿ. ಮೈಮುಲ್‌ನಿಂದ ಹಾಲು ಉತ್ಪಾದಕರಿಗೆ ಬೋನಸ್ ಹಾಗೂ ರಾಸುಗಳಿಗೆ ವಿಮೆ ಸೌಲಭ್ಯ, ರೈತ ಕಲ್ಯಾಣ ಟ್ರಸ್ಟ್‌ನಿಂದ ವಿವಿಧ ಸೌಲಭ್ಯ ನೀಡಲಾಗುತ್ತಿದೆ ಎಂದರು. ಪಶು ಆಹಾರದೊಂದಿಗೆ ಮಿನರಲ್ಸ್ಗಳನ್ನೂ ಕಡ್ಡಾಯವಾಗಿ ಹಸುಗಳಿಗೆ ಕೊಡಬೇಕು. ಇದರಿಂದ ಅವು ಸದೃಢವಾಗುತ್ತದೆ ಹಾಗೂ ಉತ್ತಮ ಗುಣಮಟ್ಟದ ಹಾಲು ಪೂರೈಸುತ್ತವೆ ಎಂದು ತಿಳಿಸಿದರು.

ಸಂಘದ ಕಾರ್ಯನಿರ್ವಾಹಕ ಟಿ. ಕುಮಾರ್ ಮಾತನಾಡಿ, ಲಾಭಾಂಶದಿಂದ ದೊರೆತ ಹಣದಿಂದ ಸಂಘದ ಅಭಿವೃದ್ಧಿ ಮಾಡುವ ವಿಧಾನಗಳ ಬಗ್ಗೆ ಸಲಹೆ ನೀಡಿದರು. ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ಮೂವರು ಸದಸ್ಯರು, ಗ್ರಾಮದ ಐದು ಜನ ವೃದ್ಧರನ್ನು ಗೌರವಿಸಲಾಯಿತು.ಸಂಘದ ಉಪಾಧ್ಯಕ್ಷ ಲೋಕೇಶ, ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ. ಸತೀಶ, ಸಂಘದ ನಿರ್ದೇಶಕರಾದ ಈಶ್ವರ, ಯೋಗಾನಂದ. ಚಂದ್ರಶೇಖರ, ಸರೋಜಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net