ಸಿಯೋನ್ ಆಶ್ರಮಕ್ಕೆ ದಿನಗೂಲಿ ಕಾರ್ಮಿಕರ ಭೇಟಿ

3
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕಕ್ಕಿಂಜೆಯ ಗಂಡಿಬಾಗಿಲಿನಲ್ಲಿರುವ ಸಿಯೋನ್ ಆಶ್ರಮಕ್ಕೆ ಮೂಡಿಗೆರೆ ಕಾಫಿ ತೋಟದ ದಿನಗೂಲಿ ಕಾರ್ಮಿಕರ ತಂಡ ಭೇಟಿ ನೀಡಿತು. ಆಶ್ರಮದ ಪ್ರತಿಯೊಂದು ಕೊಠಡಿಗೆ ಭೇಟಿ ನೀಡಿ ನಿವಾಸಿಗಳೊಂದಿಗೆ ಕುಶಲ ಕ್ಷೇಮ ವಿಚಾರಿಸಲಾಯಿತು. ಸಿಯೋನ್ ಆಶ್ರಮ ಸಂಸ್ಥಾಪಕ, ಮೇಲ್ವಿಚಾರಕ ಡಾ.ಯು.ಸಿ.ಪೌಲೋಸ್ ಅವರನ್ನು ಸನ್ಮಾನಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಡಾ.ಯು.ಸಿ.ಪೌಲೋಸ್, ಆಶ್ರಮಕ್ಕೆ ಸಮಾಜದ ಸರ್ವರ ಸಹಕಾರ ಅಗತ್ಯವಿದೆ. ಸಮಾಜದಿಂದ ಮೂಲೆಗುಂಪಾಗುವ ಜನರಿಗೆ ಆಹಾರ, ಆರೋಗ್ಯ, ಆಶ್ರಯ ಕಲ್ಪಿಸಿ ಕೊಡುವುದೇ ನಮ್ಮ ಉದ್ದೇಶ. ಈ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ನಮ್ಮ ಜತೆಯಲ್ಲಿ ಸದಾ ನಿಂತಿದೆ ಎಂದರು.

ಆಶ್ರಮದ ಆಡಳಿತ ಮಂಡಳಿಗೆ ಧನಸಹಾಯ ಮಾಡಲಾಯಿತು. 35 ಕೆ.ಜಿ. ಕಲ್ಲಂಗಡಿ ಹಣ್ಣನ್ನು ಆಶ್ರಮದ ನಿವಾಸಿಗಳಿಗೆ ನೀಡಲಾಯಿತು. ಸಿಯೋನ್ ಆಶ್ರಮದ ಸಿಬ್ಬಂದಿ ವರ್ಗ ಸೇರಿದಂತೆ ಮೂಡಿಗೆರೆ ಚಂದ್ರಾಪುರ ಗ್ರಾಮದ ನಿವಾಸಿಗಳು, ಕಾಫಿ ತೋಟದ ದಿನಗೂಲಿಗರ ತಂಡದ ನಾಯಕ ಗಣೇಶ್, ಹೂವಣ್ಣ, ರಮೇಶ್, ಸುರೇಶ್, ಅನಿಲ್, ಪ್ರಶಾಂತ್, ಪ್ರವೀಣ, ಅರವಿಂದ, ಅಶೋಕ, ಕೃಷ್ಣ, ನಂದ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net