ಸಶಕ್ತ ಬದುಕಿಗೆ ದಗ್ರಾಯೋ ಆಸರೆ

19 NRD-3
Published on

ನರಗುಂದ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಗ್ರಾಮೀಣರಿಗೆ ಶೈಕ್ಷಣಿಕ, ಆರ್ಥಿಕ, ವಸತಿ ಸೌಲಭ್ಯ ಹಾಗೂ ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಪ್ರಕೃತಿ ವಿಕೋಪ ಯೋಜನೆಯಡಿ ಪರಿಹಾರ ಧನ ನೀಡಲಾಗುತ್ತದೆ. ಅರ್ಹರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಧಗ್ರಾಯೋ ತಾಲೂಕು ಯೋಜನಾಧಿಕಾರಿ ಜಗದೀಶ ಭಂಡಾರಿ ಹೇಳಿದರು.

ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಕೊಣ್ಣೂರಿನ ಕೆಇಎಸ್ ಕಾಲೇಜ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.

ಧರ್ಮಸ್ಥಳ ಸಂಸ್ಥೆಯು ಒಂದೊತ್ತಿನ ದಾನಕ್ಕೆ ಹೆಸರಾಗದೆ ದುಡಿದು ತಿನ್ನುವುದನ್ನು ಕಲಿಸುವ ಮೂಲಕ ಪ್ರತಿಯೊಬ್ಬರಿಗೂ ಸುಂದರ ಬದುಕು ಕಲ್ಪಿಸಿಕೊಡುತ್ತಿದೆ. ಇದಕ್ಕಾಗಿಯೇ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸ್ವಸಹಾಯ ಸಂಘಗಳನ್ನು ಸ್ಥಾಪನೆ ಮಾಡಿದ್ದಾರೆ. ಮಹಿಳೆಯರು ತಮ್ಮ ಎಲ್ಲ ಹಕ್ಕುಗಳನ್ನು ಸ್ವಯಂ ಪ್ರತಿಪಾದಿಸಬೇಕು. ಈ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರಗಳು ನಿರಂತರವಾಗಿ ಕೆಲಸ ಮಾಡುತ್ತಿದೆ. ಮಹಿಳೆಯರಿಗೆ ಸಂಘವು ನೈತಿಕ ಸ್ಥೈರ್ಯ ತುಂಬುತ್ತಿದೆ ಎಂದರು.

ಕೆಇಎಸ್ ಕಾಲೇಜ್ ಪ್ರಾಚಾರ್ಯ ಎಸ್.ಕೆ. ಜೋಶಿ ಮಾತನಾಡಿದರು. ಎಸ್.ಎಚ್. ನರಗುಂದ, ಎಚ್.ಎಸ್. ಹಳೆಹೋಳಿ, ಶಂಕರಗೌಡ ಯಲ್ಲಪ್ಪಗೌಡ್ರ, ಕೆಇಎಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಎಸ್.ಬಿ. ಭೂಸರಡ್ಡಿ, ಬಿ.ಡಿ. ಮಾನೆ, ಎಸ್.ಬಿ. ಸುನ್ನಾಳ, ಕೆ.ಟಿ. ಚವ್ಹಾಣ, ಬಿ.ವೈ. ಅಳಗವಾಡಿ, ಎಸ್.ಬಿ. ಪಾಟೀಲ, ಬಿ.ಎಸ್. ಪಾಟೀಲ, ಬಾಳನಗೌಡ ಪಾಟೀಲ, ರಾಚಯ್ಯ ಹಿರೇಮಠ, ಸಿದ್ಧಪ್ಪ ಹೂಲಿ, ಬಿ.ಎನ್.ಪೂಜಾರ, ಪಿ.ಬಿ. ಹಾದಿಮನಿ ಇತರರಿದ್ದರು. ಮಂಜುಳಾ ಹಾದಿಮನಿ, ವಿಶಾಲ ಶಿಂಧೆ, ಅರುಣ ಅಸೂಟಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net