ದಡ್ಡಿ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ

22Uk2
Published on

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ದಡ್ಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ದಯಾನಂದ ಪಾಟೀಲ, ಉಪಾಧ್ಯಕ್ಷರಾಗಿ ತುಕಾರಾಮ ರೇಡೇಕರ ಆಯ್ಕೆಯಾದರು.

ದಡ್ಡಿ ಗ್ರಾಮದ ಪಿಕೆಪಿಎಸ್ ಕಾರ್ಯಾಲಯದಲ್ಲಿ ಶನಿವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೆ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಸಂತೋಷ ಹೆಗಡೆ ಘೋಷಿಸಿದರು.

ಬಳಿಕ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರಾದ ಉತ್ತಮ ಪಾಟೀಲ, ಬಸವರಾಜ ಮುಂಗರವಾಡಿ, ವಿಲಾಸ ನಾರ್ವೇಕರ, ಸಂಪತ ಭಾಂದುರ್ಗೆ, ಮೀನಾಕ್ಷಿ ಕೇಸ್ತಿ, ಸಂಗೀತಾ ಸುಂಡಕರ, ಶಹನಾಜಬೇಗ್‌ಂ ನಾಯಿಕವಾಡಿ, ಮಾರುತಿ ಕೋಲಕಾರ, ಗಣಪತಿ ಇಟಗಿ, ಮಲಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net