ಮಗಳು ಪ್ರೇಮವಿವಾಹವಾಗಿದ್ದಕ್ಕೆ ನದಿಗೆ ಹಾರಿದ ಅಪ್ಪ

13sor1
Published on

ಸೊರಬ: ಮಗಳ ಪ್ರೇಮ ವಿವಾಹದಿಂದ ಮನನೊಂದ ತಂದೆ ಸೋಮವಾರ ವರದಾ ನದಿಗೆ ಹಾರಿದ್ದಾರೆ. ಜಡೆ ಹೋಬಳಿಯ ಕೆರೆಹಳ್ಳಿ ಗ್ರಾಮದ ಸುರೇಶ್ (45) ನದಿಗೆ ಧುಮುಕಿದವರು. ಪಕ್ಕದ ಮನೆಯ ಹುಡುಗನನ್ನು ಪ್ರೀತಿಸುತ್ತಿದ್ದ ಸುರೇಶ್ ಅವರ ಮಗಳು ವಾರದ ಹಿಂದೆ ಯಾರಿಗೂ ಹೇಳದೆ ಹೋಗಿ ಮದುವೆಯಾದ್ದಳು.

ಸೋಮವಾರ ಇಬ್ಬರನ್ನೂ ಆನವಟ್ಟಿ ಪೊಲೀಸ್ ಠಾಣೆಗೆ ಕರೆತಂದು ಬಳಿಕ ಹುಡಗನ ಮನೆಗೆ ಹುಡುಗಿ ತುಂಬಿಸಿಕೊಳ್ಳುವ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ಇದರಿಂದ ಮನನೊಂದ ಸುರೇಶ್ ಅವರು ಊರಿಗೆ ಬರá-ವ ಮೊದಲೇ ಸೋಮವಾರ ನಸುಕಿನಲ್ಲಿ ವರದಾ ನದಿಗೆ ಸೇತá-ವೆಯಿಂದ ಹಾರಿದ್ದಾರೆ. ಇದ್ದನ್ನು ನೋಡಿದ ಮೀನುಗಾರರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಕೆಲಹೊತ್ತು ಹುಡುಕಾಡಿದರೂ ಸುಳಿವು ಸಿಗಲಿಲ್ಲ. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಆ ವ್ಯಕ್ತಿ ಪತ್ತೆಯಾಗಿಲ್ಲ ಹಾಗೂ ನೀರಿನ ಸೆಳೆತಕ್ಕೆ ಇನ್ನೂ ದೂರ ಕೊಚ್ಚಿ ಹೋಗಿರಬಹುದು ಎಂದು ಅಗ್ನಿಶಾಮಕ ಸಿಬ್ಬಂದಿ ಶಂಕಿಸಿದ್ದಾರೆ. ಆನವಟ್ಟಿ ಠಾಣೆಯಲ್ಲಿ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net