ಅನಧಿಕೃತ ಡಬ್ಬಾ ಅಂಗಡಿಗಳ ತೆರವು

Dabba Angadi New
Published on

ಹುಬ್ಬಳ್ಳಿ : ಇಲ್ಲಿನ ಗದಗ ರಸ್ತೆಯ ಇಕ್ಕೆಲಗಳಲ್ಲಿದ್ದ ಅನಧಿಕೃತ 23 ಡಬ್ಬಾ ಅಂಗಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ತೆರವುಗೊಳಿಸಿದರು.

ಪಾಲಿಕೆ ವಲಯ ಕಚೇರಿ 6ರ ಅಧಿಕಾರಿಗಳು ಪೊಲೀಸ್ ಇಲಾಖೆ ಸಹಾಯದೊಂದಿಗೆ ಬೆಳಗ್ಗೆ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ ಪ್ರಾರಂಭಿಸಿದರು.

ಚಹಾ ಅಂಗಡಿ, ಪಾನ್ ಶಾಪ್, ಪಂಕ್ಚರ್ ಶಾಪ್ ಸೇರಿದಂತೆ ವಿವಿಧ ವ್ಯಾಪಾರಸ್ಥರು ರಸ್ತೆ ಇಕ್ಕೆಲಗಳಲ್ಲಿ ಅನಧಿಕೃತವಾಗಿ ಡಬ್ಬಾ ಅಂಗಡಿ ಇಟ್ಟುಕೊಂಡಿದ್ದರು. ಅಂಗಡಿಗಳನ್ನು ತೆರವುಗೊಳಿಸುವಂತೆ ಪಾಲಿಕೆ ಅಧಿಕಾರಿಗಳು ಹಲವಾರು ಬಾರಿ ಸೂಚನೆ ನೀಡಿದರು.

ಆದರೂ ಅಂಗಡಿಗಳನ್ನು ತೆರವುಗೊಳಿಸಿರಲಿಲ್ಲ. ಮಂಗಳವಾರ ಬೆಳಗ್ಗೆ ಎರಡು ಜೆಸಿಬಿ, ನಾಲ್ಕು ಟ್ರಾ್ಯಕ್ಟರ್, 25 ಕಾರ್ವಿುಕರೊಂದಿಗೆ ಸೇರಿಕೊಂಡು ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲಾಯಿತು.

ಸ್ಥಳಕ್ಕೆ ಆಗಮಿಸಿದ ಡಬ್ಬಾ ಅಂಗಡಿ ಮಾಲೀಕರು, ಅಂಗಡಿಯೊಳಗೆ ಇದ್ದ ಸಣ್ಣಪುಟ್ಟ ಸಾಮಗ್ರಿಗಳನ್ನು ತೆಗೆದುಕೊಂಡರು.

ಪಾಲಿಕೆ ವಲಯ ಕಚೇರಿ 6 ರ ಅಧಿಕಾರಿಗಳು, ಕಿರಿಯ ಅಭಿಯಂತರರು, ನೈರ್ಮಲ್ಯ ನಿರೀಕ್ಷಕರು ಹಾಗೂ ಮತ್ತಿತರರು ಹಾಜರಿದ್ದರು. ಕೇಶ್ವಾಪುರ ಠಾಣೆ ಪೊಲೀಸರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net