

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಎಂದು ಶಿವಗಂಗೆ ಗ್ರಾಪಂ ಅಧ್ಯಕ್ಷ ಕೆ.ಬಿ.ಪ್ರಭುದೇವ ತಿಳಿಸಿದರು.
ಸೋಂಪುರ ಹೋಬಳಿಯ ಶಿವಗಂಗೆ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿವಗಂಗೆ ಕ್ಲಸ್ಟರ್‌ಹಂತದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಇಂತಹ ಕಾರ್ಯಕ್ರಮ ಪೂರಕ ಎಂದರು.
ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾವಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಸೂಕ್ತ ವೇದಿಕೆ ಕಲ್ಪಿಸಿದರೆ ಪ್ರತಿಭೆ ಅನಾವರಣ ಆಗಲಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ ನಾಯಕ, ಗ್ರಾಪಂ ಸದಸ್ಯೆ ಚೇತನಾ ನಾಗೇಶನಾಯಕ, ಪಿಡಿಒ ಗಿರೀಶ್‌ಕುಮಾರ, ಮುಖ್ಯಶಿಕ್ಷಕಿ ಸುಮಂಗಳಾ, ಎಂ.ಎಸ್.ಮಂಗಳಾ, ವಾಸುದೇವಸೂರ್ತಿ, ಎಂ.ಜಿ.ಸುಜಾತಾ, ಶಿಬನಯ್ಯ, ಸಿ.ಎಂ.ರಂಗಸ್ವಾಮಯ್ಯ ಇದ್ದರು.