ಜೆಎಸ್ಎಸ್ ಸ್ಕೂಲ್ ನಲ್ಲಿ ಕಲಾ ಉತ್ಸವ,  ಡಾ. ಡಿ. ವೀರೇಂದ್ರ ಹೆಗ್ಗಡೆ 58ನೇ ಪಟ್ಟಾಭಿಷೇಕ ಮಹೋತ್ಸವ

IMG-20251026-WA0012-1.jpg
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 58ನೇ ಪಟ್ಟಾಭಿಷೇಕದ ಸವಿ ನೆನಪಿಗಾಗಿ ಏರ್ಪಡಿಸಿದ್ದ "ಕಲಾ ಉತ್ಸವ'ದಲ್ಲಿ ಮಕ್ಕಳು ವಿವಿಧ ವೇಷಭೂಷಣ, ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರತಿಭೆ ತೋರಿದರು.

ಶಾಲೆಯ ಪ್ರಾಚಾರ್ಯೆ ರಜನಿ ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳು ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆ ಅನಾವರಣ ಮಾಡಬೇಕು ಎಂದರು.

ಒಂದು, ಎರಡನೇ ತರಗತಿ ಚಿಣ್ಣರಿಗೆ "ಪೌರಾಣಿಕ ಪಾತ್ರಗಳ ಅಲಂಕಾರಿಕ ವಿನ್ಯಾಸ' ಸ್ಪರ್ಧೆಗಳನ್ನು ನಡೆಸಲಾಯಿತು.
3, 4ನೇ ತರಗತಿ ಮಕ್ಕಳಿಗೆ "ಭಾರತೀಯ ಹಬ್ಬಗಳು' ಶೀರ್ಷಿಕೆ ಅಡಿ, ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

5, 6ನೇ ತರಗತಿಯ ವಿದ್ಯಾರ್ಥಿಗಳಿಗೆ "ದೇಶಭಕ್ತಿ ಗೀತೆಗಳ' (ಕನ್ನಡ ಮತ್ತು ಹಿಂದಿ) ಗುಂಪು ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
7, 8ನೇ ತರಗತಿಯವರಿಗೆ "ಮಣ್ಣಿನ ಮಡಕೆ ವಿನ್ಯಾಸ' ಮಾಡುವ ಸ್ಪರ್ಧೆ ಆಯೋಜಿಸಲಾಗಿತ್ತು.

9, 10ನೇ ತರಗತಿಯರಿಗೆ "ಜನಪದ ನೃತ್ಯಗಳ' ಪ್ರದರ್ಶನ ಏರ್ಪಡಿಸಲಾಗಿತ್ತು. ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮಗಳಲ್ಲಿ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಹಾಗೂ ಸಹ ಸಂಯೋಜಕರು ಉಪಸ್ಥಿತರಿದ್ದು, ಯಶಸ್ವಿಯಾಗಿ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net