ಡಿ.ವಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ 29ರಂದು

26 Dwd 2 22222222
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದ ಚಿತ್ರಕಲಾಶಿಲ್ಪಿ ಡಿ.ವಿ. ಹಾಲಭಾವಿ ಸ್ಮಾರಕ ಟ್ರಸ್ಟ್ ವತಿಯಿಂದದ ಡಿ.ವಿ. ಹಾಲಭಾವಿ ಜನ್ಮದಿನಾಚರಣೆ ಡಿ.ವಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವವನ್ನು ನ. 29ರಂದು ಸಂಜೆ 5.30 ಗಂಟೆಗೆ ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ.

ಗೋಕಾಕನ ಸಿದ್ದಪ್ಪ ಸತ್ಯಪ್ಪ ಪಾಟೀಲ ಅವರಿಗೆ ಜೀವಮಾನ ಸಾಧನೆಯ `ಕುಂಚ ಕಲಾತಪಸ್ವಿ' ಪ್ರಶಸ್ತಿ, ಗದಗನ ಕಮಲ್‌ಅಹ್ಮದ್ ಎಂ. ಅವರಿಗೆ `ಕುಂಚ ಕಲಾವಿದ' ಪ್ರಶಸ್ತಿ ಹಾಗೂ ಮಹಾರಾಷ್ಟದ ನಾಸಿಕ್‌ನ ನಿಲೇಶ ಡಿ. ಭಾರ್ತಿ ಮತ್ತು ಮುಂಬೈನ ನಿಲಿಶಾಫಾಡ್ ಅವರಿಗೆ `ಯುವ ಕುಂಚ ಕಲಾಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗೌರವ ಉಪಸ್ಥಿತರಿರುವರು. ಕಾರ್ಮಿಕ ಸಚಿವ ಸಂತೋಷ ಎಸ್. ಲಾಡ್ ಪ್ರಶಸ್ತಿ ಪ್ರದಾನ ಮಾಡುವರು. ಹಿರಿಯ ಚಲನಚಿತ್ರ ನಟ ಹಾಗೂ ನಿರ್ದೇಶಕ ಸುರೇಶ್ ಹೆಬ್ಳೀಕರ ಹಾಗೂ ಜಿಲ್ಲೆಯ ಶಾಸಕರು ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net