

ಕೊಕ್ಕರ್ಣೆ: ನಡೂರು ರಜತಾದ್ರಿ ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘ, ಬ್ರಹ್ಮಾವರ ಗಾಳಿಮನೆ ನಡೂರು ದಿ.ಶಿವರಾಮ ಶೆಟ್ಟಿ ಜನ್ಮ ಶತಮಾನೋತ್ಸವ ಸಮಿತಿ ವತಿಯಿಂದ ಸಪ್ತ ಸಂಸ್ಥೆಗಳ ಸಂಸ್ಥಾಪಕ ನಡೂರು ದಿ.ಶಿವರಾಮ ಶೆಟ್ಟಿ ಪುತ್ಥಳಿ ಅನಾವರಣ, ಶಾಲಾ ನೂತನ ವಾಹನ ಹಸ್ತಾಂತರ, ಜಿಲ್ಲಾಮಟ್ಟದ ವೃತ್ತಿ ಶಿಕ್ಷಣದ ವಸ್ತು ಪ್ರದರ್ಶನ ಮತ್ತು ಕಲಿಕೋತ್ಸವ, ಹಿರಿಯರ ಕರಾವಳಿ ಕೃಷಿ ಉಪಕರಣಗಳ ಪ್ರದರ್ಶನ, ಜನ್ಮ ಶತಮಾನೋತ್ಸವ ಸಮಾರೋಪ ಶನಿವಾರ ನಡೂರು ಶ್ರೀವಾಣಿ ಪ್ರೌಢಶಾಲಾ ವಠಾರದಲ್ಲಿ ಜರುಗಿತು.
ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ ಹೆಗ್ಡೆ ಪುತ್ಥಳಿ ಅನಾವರಣಗೊಳಿಸಿದರು. ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಭೋಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಶಾಸಕ ಕಿರಣ್ ಕೊಡ್ಗಿ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಘಟಪ್ರಭ ಉದ್ಯಮಿ, ವಾಹನ ದಾನಿ ಎಚ್.ಜಯಶೀಲ ಶೆಟ್ಟಿ, ಪ್ರಮುಖರಾದ ಶಿವರಾಮ ಹೆಗ್ಡೆ ಬೆಂಗಳೂರು, ಕೆ.ಗಣಪತಿ, ವಿಶ್ವನಾಥ ಶೆಟ್ಟಿ ಮಟಪಾಡಿ, ಶಬಾನಾ ಅಂಜುಮ್, ಜಲಂಧರ ಶೆಟ್ಟಿ, ಬಿ.ಭುಜಂಗ ಶೆಟ್ಟಿ, ನಾಗರಾಜ್, ಗಣಪ ಎನ್., ಸಮಿತಿಯ ರಾಜಾರಾಮ್ ಶೆಟ್ಟಿ ಬ್ರಹ್ಮಾವರ, ಶೇಡಿಕೊಡ್ಲು ವಿಠಲ ಶೆಟ್ಟಿ ಮಂದಾರ್ತಿ, ಎನ್.ಹರೀಂದ್ರನಾಥ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ದಿನಕರ ಶೆಟ್ಟಿ ಬೈಕಾಡಿ, ವಿಶ್ವನಾಥ ಶೆಟ್ಟಿ, ಶೇಖರ ಶೆಟ್ಟಿ ಕೆ., ಕೆ.ಬಾಲಕೃಷ್ಣ ಹೆಗ್ಡೆ, ಬಸವರಾಜ್ ಕುಲಾಲ್, ಪ್ರಭಾಕರ ನೀಲಾವರ, ಗಣೇಶ್ ಎಂ., ಡಾ.ಸಂತೋಷ್ ಕುಮಾರ್ ಶೆಟ್ಟಿ, ಸಖಾರಾಮ ಸೋಮಯಾಜಿ, ಎಚ್.ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು. ಮನೋರಂಜನಾ ಕಾರ್ಯಕ್ರಮ ಜರುಗಿತು.