

ಮೈಸೂರು: ನಗರದ ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಡಿ.ಎಸ್.ವಿಜಯಲಕ್ಷ್ಮಿ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ 9 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 8ನೇ ರ‌್ಯಾಂಕ್ ಪಡೆದಿದ್ದಾರೆ.
ರಾಜ್ಯಶಾಸ್ತ್ರದಲ್ಲಿ 5, ಇಂಗ್ಲಿಷ್ ಹಾಗೂ ಭೂಗೋಳಶಾಸ್ತ್ರದಲ್ಲಿ ತಲಾ 2 ಅಂಕ ಹೆಚ್ಚುವರಿಯಾಗಿ ಬಂದಿದೆ. ಕನ್ನಡದಲ್ಲಿ 98, ಇಂಗ್ಲಿಷ್‌ನಲ್ಲಿ 93, ಇತಿಹಾಸದಲ್ಲಿ 99, ಅರ್ಥಶಾಸ್ತ್ರದಲ್ಲಿ 100ಕ್ಕೆ ನೂರು, ಭೂಗರ್ಭಶಾಸ್ತ್ರದಲ್ಲಿ 97, ರಾಜ್ಯ ಶಾಸ್ತ್ರದಲ್ಲಿ 98 ಅಂಕದೊಂದಿಗೆ ಒಟ್ಟು 585 ಅಂಕ ಪಡೆದಿದ್ದಾರೆ. ದೂರ ಗ್ರಾಮದ ಎಂ.ಸ್ವಾಮಿ, ಆರ್.ಪೂರ್ಣಿಮಾ ದಂಪತಿ ಪುತ್ರಿಯಾದ ಈಕೆ, ಮುಂದೆ ಐಎಎಸ್ ಅಗುವ ಕನಸು ಕಂಡಿದ್ದಾರೆ.