

ಗದಗ: ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕೆ.ಎಚ್. ಪಾಟೀಲ ಪ್ರತಿಷ್ಠಾನ ಹಾಗೂ ಗದಗ ಪರಿಸರದ ಸಹಕಾರಿಗಳ ಸಂಯುಕ್ತ ಆಶ್ರಯದಲ್ಲಿ ಕೆ.ಎಚ್. ಪಾಟೀಲ 98ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಮಾ. 16ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯ, ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 16ರಂದು ಬೆಳಗ್ಗೆ 10.30ಕ್ಕೆ ನಡೆಯುವ ಜಯಂತ್ಯುತ್ಸವ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಹುಲಕೋಟಿ ಕೋ.ಆಪಾಯಿಲ್ ಆಂಡ್ ಫೀಡ್ಸ್ ಸೊಸೈಟಿಯ ಸಾಮರ್ಥ್ಯ ವೃದ್ಧಿಗೊಂಡಿರುವ ನವೀಕೃತ ಪಶು ಆಹಾರ ಉತ್ಪಾದನಾ ಟಕವನ್ನು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯ ಬಾಲಚಂದ್ರ ಜಾರಕಿಹೊಳಿ ಲೋಕಾರ್ಪಣೆಗೊಳಿಸುವರು ಎಂದರು. ಸಲೀಂ ಅಹ್ಮದ್, ಎ.ಎಂ. ಹಿಂಡಸಗೇರಿ, ಶಿವಾನಂದ ಕೌಜಲಗಿ, ಸಂಸದ ಸಿ. ನಾರಾಯಣಸ್ವಾಮಿ, ಐ.ಜಿ. ಸನದಿ ಉಪಸ್ಥಿತಿ ಇರುವರು. ಶಾಸಕ ಎಚ್.ಕೆ. ಪಾಟೀಲ ಕಾರ್ಯಕ್ರಮ ಅಧ್ಯತೆ ವಹಿಸುವರು ಎಂದು ಡಿ.ಆರ್ ಪಾಟೀಲ ಹೇಳಿದರು.
ಪ್ರಶಸ್ತಿ ಪ್ರಧಾನ:
ಉತ್ತರ ಕರ್ನಾಟಕ ಭಾಗದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ಸಾಧನೆ ಮಾಡಿದ ಹಿರಿಯ ನೇತ್ರತ ಪುರಸತ ಡಾ. ಎಂ.ಎಂ. ಜೋಶಿ ಅವರಿಗೆ ಕೆ.ಎಚ್. ಪಾಟೀಲ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ವಿಧಾನ ಪರಿಷತ್ನ ವಿರೋಧ ಪದ ನಾಯಕ ಬಿ.ಕೆ. ಹರಿಪ್ರಸಾದ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಡಿ.ಆರ್. ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರವಿ ಮೂಲಿಮನಿ, ಜೆ.ಕೆ. ಜಮಾದಾರ, ಬಸವರಾ ಸುಂಕಾಪುರ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ ಇತರರು ಇದ್ದರು.