ವೀರ ಮಡಿವಾಳ ಮಾಚಿದೇವರ ಸಂಘಕ್ಕೆ ಡಿ.ಪಿ.ರಾಜೇಶ್ ಅಧ್ಯಕ್ಷ

ವೀರ ಮಡಿವಾಳ ಮಾಚಿದೇವರ ಸಂಘಕ್ಕೆ ಡಿ.ಪಿ.ರಾಜೇಶ್ ಅಧ್ಯಕ್ಷ
Published on

ವಿರಾಜಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವೀರಮಡಿವಾಳ ಮಾಚಿದೇವರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಪಿ.ರಾಜೇಶ್ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಪುರಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನೂತನ ಆಡಳಿತ ಮಂಡಳಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.

ಸಂಘದ ಉಪಾಧ್ಯಕ್ಷರಾಗಿ ಗಿರಿಜಾ ಕಾಶಿ, ಡಿ.ಜಿ.ಕೇಶವ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಆರ್ ಮಹದೇವ್, ಕಾರ್ಯದರ್ಶಿಯಾಗಿ ಎಂ.ಕೆ.ಗಣೇಶ್ ಹಾಗೂ ಅಭಿಷೇಕ್, ಖಜಾಂಚಿಯಾಗಿ ಡಿ.ಟಿ.ವನಿತಾ ವಸಂತ, ನಿರ್ದೇಶಕರಾಗಿ ಎಂ.ವಿ.ಸತೀಶ್‌ಕುಮಾರ್, ರವಿ , ಡಿ.ಸಿ.ಗಿರೀಶ್, ವಿನಿತ್‌ಕುಮಾರ್, ರಮ್ಯಾ, ದೇವರಾಜ್ ಆಯ್ಕೆಯಾಗಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಕೆ.ರವಿಕುಮಾರ್, ಕ್ರೀಡಾಕೂಟ ಸಮಿತಿ ಅಧ್ಯಕ್ಷರಾಗಿ ಎಂ.ಕೆ.ನಿತೀನ್ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net