

ಮಂಗಳೂರು : ಭಾರತ ಚುನಾವಣಾ ಆಯೋಗ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2025ರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18,13,556 ಮತದಾರರಿದ್ದಾರೆ. ಈ ಪೈಕಿ ಪುರುಷರು-884373, ಮಹಿಳೆಯರು 929115, ಮಂಗಳಮುಖಿಯರು-68.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಸೋಮವಾರ ತಮ್ಮ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತದಾರರ ಪಟ್ಟಿಯನ್ನು ಹಸ್ತಾಂತರಿಸಿದರು.
*ವಿಧಾನಸಭಾವಾರು ವಿವರ:
ಬೆಳ್ತಂಗಡಿ- 232235, ಮೂಡಬಿದ್ರಿ- 210088, ಮಂಗಳೂರು ನಗರ ಉತ್ತರ - 255515, ಮಂಗಳೂರು ನಗರ ದಕ್ಷಿಣ - 252268, ಮಂಗಳೂರು - 210127, ಬಂಟ್ವಾಳ-228962, ಪುತ್ತೂರು-216068, ಸುಳ್ಯ 208293.
ಜ. 6ರ ನಂತರ ನಿರಂತರ ಪರಿಷ್ಕರಣೆ ಚಾಲ್ತಿಯಲ್ಲಿದ್ದು ಜ.1, ಏ. 1, ಜು. 1 ಹಾಗೂ ಅ.1ದಿನಾಂಕಗಳಿಗೆ 18 ವರ್ಷ ತುಂಬುವ ಮತದಾರರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ನಿರಂತರ ಪರಿಷ್ಕರಣೆಯ ಸಂದರ್ಭದಲ್ಲಿ , ತೆಗೆದು ಹಾಕಲು ಮತ್ತು ತಿದ್ದುಪಡಿ ಮಾಡಲು ಅವಕಾಶವಿದೆ.