

ಕಲಬುರಗಿ: ರಾಜ್ಯದ ಮೂವರು ಸಂಸತ್ ಸದಸ್ಯರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸದರ ವಿರುದ್ಧ ಜನವಿರೋಧಿ ಅಲೆ ಇದೆ. ಬಹಳ ಜನ ಬಿಜೆಪಿಗೆ ಬರುವವರು ಇದ್ದಾರೆ. ಹಾಲಿ ಸಂಸದರು ಮೂರು ಜನ ಪಕ್ಷಕ್ಕೆ ಬರೋದ್ರ ಬಗ್ಗೆ ಕೂಡ ಮಾತಾಡಿದ್ದಾರೆ. ಯಾರ್ಯಾರು ಅನ್ನೋದ್ರ ಬಗ್ಗೆ ನಾನು ಇವಾಗ ಬಹಿರಂಗ ಮಾಡಲ್ಲ.
ನಮ್ಮ ಪಕ್ಷವನ್ನ ಒಪ್ಪಿ ಬರೋದಾದ್ರೆ ಬನ್ನಿ ಅಂತಾ ಹೇಳಿದ್ದೆನೆ ಎಂದು ಹೇಳಿದರು.
ಸಿಇಸಿ ಸಭೆ ಕರೆಯಬೇಕು , ಸಿಇಸಿ ಸಭೆ ಮುಗಿದ ಒಂದು ಗಂಟೆಯಲ್ಲೆ ಟಿಕೆಟ್ ಅನೌನ್ಸ್ ಆಗುತ್ತೆ. ಲೋಕಸಭೆಯಲ್ಲಿ ಕಾಂಗ್ರೆಸ್ 20 ಸೀಟ್ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಬಿಜೆಪಿಯವರು ಹಾಲಿ ಹತ್ತು ಸಂಸದರನ್ನ ಬದಲಾವಣೆ ಮಾಡ್ತಿದ್ದಾರೆ. ಡಾ ಮಂಜುನಾಥ , ದೇವೆಗೌಡರು , ಕುಮಾರಸ್ವಾಮಿ ಬಗ್ಗೆ ಗೌರವ ಇದೆ. ದೇವಗೌಡರ ಮೇಲೆ ಹೆಣ್ಣು ಮಗಳನ್ನ ನಿಲ್ಲಿಸಿ ಗೆದ್ದಿದ್ದೇವೆ. ಕುಮಾರಸ್ವಾಮಿ , ದೇವೆಗೌಡರ ಮೇಲೆ ಗೆದ್ದಿದ್ದೇವೆ ಎಂದರು.
ಮಂಜುನಾಥ್ ನಿಲ್ತಿದ್ದಾರೆ ನಿಲ್ಲಲಿ ಪರವಾಗಿಲ್ಲ. ಡಿ ಕೆ ಸುರೇಶ್ ಸಂಸದ ಅಷ್ಟೆ ಅಲ್ಲ ಪಂಚಾಯತಿ ಮೆಂಬರ್ ಮಾಡುವ ಕೆಲಸ ಮಾಡ್ತಿದ್ದಾರೆ. ಕುಮಾರಸ್ವಾಮಿ ಹೇಳ್ತಿದ್ದಾರೆ ಅವರ ಸಿಸ್ಟರ್ ಅಳ್ತಿದ್ದಾರೆ ಎಂದು ವ್ಯಂಗ್ಯವಾಡಿದರು.