ಸವದಿ, ಶೆಟ್ಟರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ- ಡಿಕೆಶಿ ಸ್ಪಷ್ಟನೆ

IMG-20230531-WA0004.jpg
Published on

ಬೆಳಗಾವಿ: ಇಡೀ ಕಾಂಗ್ರೆಸ್ ಪಕ್ಷ ಸವದಿ, ಶೆಟ್ಟರ್ ಜೊತೆಗಿದೆ. ಗೆದ್ದಿರಬಹಯದು, ಸೋತಿರಬಹುದು
ಈ ಇಬ್ಬರು ನಮ್ಮ ಪಕ್ಷದ ನಾಯಕರು. ಯಾರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಉಪ‌ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಚುನಾವಣೆ ಯಾದ ಮೇಲೆ ಶಕ್ತಿ ಕೊಟ್ಟ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ‌.
ಸಂಪುಟ ರಚನೆ, ಗ್ಯಾರಂಟಿ ಯೋಜನೆ ನೀಡುವ ಒತ್ತಡ ಇತ್ತು. ಈಗ ಸಮಯ ಮಾಡಿಕೊಂಡು ಸವದಿ, ಶೆಟ್ಟರ್ ಭೇಟಿ ಮಾಡುತ್ತಿದ್ದೇನೆ. ಇರುವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಮ್ಮ ಪಕ್ಷಕ್ಕ ಬಂದು ಶಕ್ತಿ ತುಂಬಿದ್ದಾರೆ. ನಾವು ಅವರಿಗೆ ಶಕ್ತಿ ತುಂಬಬೇಕು. ಔಪಚಾರಿಕ ಭೇಟಿ ಅಷ್ಟೇ ಏನು ವಿಶೇಷ ಇಲ್ಲ ಎಂದರು.
ಸೋಲು ಕಂಡವರಲ್ಲಿ, ಪಕ್ಷ ಬಿಟ್ಟು ಬಂದು ಶಾಸಕರಾದವರು ಯಾರೂ ಸಚಿವ ಸ್ಥಾನದ ಬೇಡಿಕೆ ಇಟ್ಟಿರಲಿಲ್ಲ. ಈಗಾಗಲೇ ಸಚಿವ ಸಂಪುಟ ಭರ್ತಿಯಾಗಿದೆ. ಮುಂದೆ ಅವರಿಗೆ ಪಕ್ಷದಲ್ಲಿ ಸ್ಥಾನ ಮಾನ ನೀಡಲಾಗುವುದು ಎಂದರು.
ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ‌ಹೆಬ್ಬಾಳ್ಕರ್ , ಶಾಸಕ ರಾಜು ಶೇಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net