ಸಮವಸ್ತ್ರ ನೀತಿ ಅನುಷ್ಠಾನಕ್ಕೆ ದ.ಕ.ಜಿಲ್ಲಾ ಬಿಜೆಪಿ ಆಗ್ರಹ

ffffffffff
Published on


ಮಂಗಳೂರು : ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರು ಈಗ ಮುಸ್ಲಿಂ ಓಲೈಕೆಗೋಸ್ಕರ ಹಿಜಾಬ್ ನಿಷೇಧ ಆದೇಶ ವಾಪಾಸ್ ಪಡೆಯಲು ಹೇಳಿದ್ದೇನೆ ಎಂಬ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ .ಹಿಜಾಬ್ ನಿಷೇಧ ಆದೇಶ ವಾಪಾಸ್ ಪಡೆಯುವ ಬದಲು ಸಮವಸ್ತ್ರ ನೀತಿಯನ್ನು ಅನುಷ್ಠಾನ ಮಾಡಬೇಕೆಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ಆಗ್ರಹಿಸಿದ್ದಾರೆ.
ಮುಸ್ಲಿಂ ರಾಷ್ಟ್ರಗಳಲ್ಲಿ ಹಿಜಾಬ್ ಜಾರಿಯಲ್ಲಿ ಇಲ್ಲದಿದ್ದರೂ ಇಲ್ಲಿ ಕೆಲ ಮತಾಂಧ ಸಂಘಟನೆಗಳು ಕೋಮು ಪ್ರಚೋದನೆಗೋಸ್ಕರ ಹಿಜಾಬ್ ಪ್ರಕರಣವನ್ನು ಹುಟ್ಟು ಹಾಕಿರುವುದು ಸಾಬೀತಾಗಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮಾನತೆಯಿಂದ ಕೂಡಿರಬೇಕೆಂಬ ಉದ್ದೇಶದಿಂದ ಸಮವಸ್ತ್ರ ನೀತಿ ಜಾರಿಯಲ್ಲಿದೆ. ಈ ನೀತಿಗೆ ಅನುಗುಣವಾಗಿ ಹಿಂದಿನ ಬಿಜೆಪಿ ಸರ್ಕಾೃ ಹಿಜಾಬ್ ನಿಷೇಧ ಮಾಡಿದಾಗ ಹೈಕೋರ್ಟ್ ಮಾನ್ಯ ಮಾಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net