ಎನ್‌ಐಎ ದಾಳಿ ಪ್ರಾಮಾಣಿಕ ಕ್ರಮ -ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಹೇಳಿಕೆ

file78tcl09uzb6j12ys1z6-1578856636
Published on

ಮಂಗಳೂರು : ದೇಶದಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಪಿಎಫ್‌ಐ ಸಂಘಟನೆಯನ್ನು ಮಟ್ಟ ಹಾಕಲು ಎನ್‌ಐಎ ಪ್ರಾಮಾಣಿಕ ಕ್ರಮ ಕೈಗೊಂಡಿದೆ. 2047ನೇ ಇಸವಿಗೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಕನಸು ಕಾಣುತ್ತಿರುವಪಿಎಫ್‌ಐಯ ನಿಜಬಣ್ಣ ಬಯಲಾಗುತ್ತಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಹೇಳಿದ್ದಾರೆ.
ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದವರ ಜತೆ ಪಿಎಫ್‌ಐ ಕಾರ್ಯಕರ್ತರು ನೇರ ಸಂಪರ್ಕದಲ್ಲಿರುವುದು ತನಿಖೆಯಿಂದ ಬಯಲಾಗುತ್ತಿದೆ. ಎಸ್‌ಡಿಪಿಐ ರಾಜಕೀಯ ಪಾರ್ಟಿ ಪಿಎಫ್‌ಐಯ ಇನ್ನೊಂದು ಮುಖ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿರುವುದು ಅಘಾತಕಾರಿ ವಿಷಯ. ಎನ್‌ಐಎ ಮುಖಾಂತರ ಕಠಿಣ ಕಾನೂನು ಕ್ರಮ ಜರುಗಿಸಲು ಮುಂದಾಗಿರುವ ಕೇಂದ್ರ ಗೃಹಸಚಿವ ಅಮಿತ್ ಷಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸುದರ್ಶನ ಮೂಡುಬಿದಿರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net