ಡಿ.ದೇವರಾಜ ಅರಸು ಆಡಳಿತ ಈಗಿನ ರಾಜಕಾರಣಿಗಳಿಗೆ ಮಾದರಿ

ದೇವರಜು ಅರಸು ಜನ್ಮ ದಿನ
ದೇವದುರ್ಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಡಿ.ದೇವರಾಜ ಅರಸು ಜಯಂತಿ ಆಚರಿಸಲಾಯಿತು. ಕಲ್ಯಾಣಾಧಿಕಾರಿ ಮಾನಪ್ಪ ಬಡಿಗೇರ್, ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ, ವಾರ್ಡ್‌ನಗಳಾದ ಭೀಮಣ್ಣ ಡಂಗೇರ್, ಮುತ್ತಣ್ಣ ಅರಕೇರಾ, ಸೋಮಣ್ಣ, ಪೂರ್ಣಿಮಾ, ಶಶಿಕಲಾ, ಸುಮಲತಾ, ಯಲ್ಲಮ್ಮ ಇದ್ದರು.
Published on

ದೇವದುರ್ಗ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸರ ಆಡಲಿತ ಎಲ್ಲರಿಗೂ ಮಾದರಿ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ ಅಭಿವೃದ್ಧಿಯ ಹರಿಕಾರ ಎನಿಸಿಕೊಂಡಿದ್ದಾರೆ ಎಂದು ಕಲ್ಯಾಣಾಧಿಕಾರಿ ಮಾನಪ್ಪ ಬಡಿಗೇರ್ ಹೇಳಿದರು.

ಪಟ್ಟಣದ ಡಿ.ದೇವರಾಜು ಅರಸು ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಡಿ.ದೇವರಾಜು ಅರಸು ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಿ.ದೇವರಾಜು ಅರಸರ ಆಡಳಿತ ಅವಧಿಯಲ್ಲಿ ಭೂ ಸುಧಾರಣಾ ಕಾಯ್ದೆ, ಋಣಮುಕ್ತ ಕಾಯ್ದೆ, ಬಡವರಿಗೆ ಅನುಕೂಲವಾಗುವಂಥ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹೀಗಾಗಿ ಅವರ ಆಡಳಿತ ಇಂದಿಗೂ ಮಾದರಿಯಾಗಿದೆ ಎಂದರು.

ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ ಮಾತನಾಡಿ, ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿಗೆ ಡಿ.ದೇವರಾಜ ಅರಸು ಕೊಡುಗೆ ಅಪಾರ. ಭೂ ಸುಧಾರಣಾ ಕಾಯ್ದೆ ಬಡವರ ಪಾಲಿನ ಆಶಾಕಿರಣವಾಗಿದ್ದು ಸ್ವಾವಲಂಬಿ ಜೀವನಕ್ಕೆ ದಾರಿಯಾಗಿದೆ ಎಂದರು.

ಹಾವನೂರು ಆಯೋಗ ರಚನೆ, ಗೇಣಿ ಹೋರಾಟದ ಅನುಷ್ಟಾನದಿಂದ ಹಿಂದುಳಿದ ವರ್ಗಗಳ ಜನಾಂಗಕ್ಕೆ ಉತ್ತಮ ಬದುಕು ಸಾಧ್ಯವಾಗಿದೆ ಎಂದರು.
ಹಾಸ್ಟೆಲ್ ವಾರ್ಡ್‌ನಗಳಾದ ಭೀಮಣ್ಣ ಡಂಗೇರ್, ಶಶಿಕಲಾ, ಸುಮಲತಾ, ಗೋವಿಂದ, ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net