ನಗರದಲ್ಲಿ ನಿರ್ಮಾಣವಾಗುತ್ತಿದೆ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್

raichur
raichur
Published on

ರಾಚಯ್ಯ ಸ್ವಾಮಿ ಮಾಚನೂರು

ರಾಯಚೂರು

ನಗರದಿಂದ ಭತ್ತ, ಹತ್ತಿ ಸೇರಿದಂತೆ ವಿವಿಧ ಕೃಷಿ ಉತ್ಪನ್ನ ಹಾಗೂ ಕೈಗಾರಿಕಾ ಸರಕುಗಳನ್ನು ಸಾಗಿಸುವ ಲಾರಿಗಳು ಮತ್ತು ಹೊರಗಿನಿಂದ ಬರುವ ಲಾರಿಗಳು ತಂಗುವುದಕ್ಕೆ ಸೂಕ್ತ ವ್ಯವಸ್ಥೆ ಇಲ್ಲಾದೆ ಕಂಗಾಲಗಿದ್ದ ಲಾರಿ ಚಾಲಕರಿಗೆ ಜಿಲ್ಲಾಡಳಿತ ಟ್ರಕ್ ಟರ್ಮಿನಲ್ ಸ್ಥಾಪನೆಗೆ ಟೆಂಡರ್ ಕರೆದಿರುವುದರಿಂದ ಸಂತಸ ತಂದಿದೆ.

ಆಂಧಪ್ರದೇಶ,ತೆಲಂಗಾಣ ರಾಜ್ಯಗಳು ಹಾಗೂ ಕರ್ನಾಟಕದ ಐದು ಜಿಲ್ಲೆಗಳನ್ನು ನೇರವಾಗಿ ಸಂಪರ್ಕಿಸುವ ರಾಯಚೂರು ಜಿಲ್ಲೆಗೆ ನಿತ್ಯ ಹತ್ತು ಸಾವಿರಾಕ್ಕೂ ಅಧಿಕ ಲಾರಿಗಳು ಸಂಚರಿಸುತ್ತಿವೆ. ಆದರೆ ಲಾರಿಗಳ ನಿಲುಗಡೆಗೆ ಯಾವುದೇ ವ್ಯವಸ್ಥೆಯಿಲ್ಲದೆ ಬಡಾವಣೆ ರಸ್ತೆಗಳು ಮತ್ತು ಮುಖ್ಯರಸ್ತೆಗಳ ಬದಿಯಲ್ಲಿ ನಿಲುಗಡೆ ಮಾಡುತ್ತಿದ್ದರಿಂದ ಟ್ರಾಫಿಕ್ ಸಮಸ್ಯೆ ಎಚ್ಚಗಿದ್ದು ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತಿದ್ದು,ಇದರಿಂದ ಜಿಲ್ಲಾಡಳಿತ ಕೆಕೆಆರ್‌ಡಿಬಿಯ ಅನುದಾನದಿಂದ ಟ್ರಕ್ ಟರ್ಮಿನಲ್ ಸ್ಥಾಪನೆಗೆ ಮುಂದಾಗಿದೆ.

ಜಿಲ್ಲೆಯಲ್ಲಿ ಕಾರ್ಖಾನೆಗಳು

ನಗರ ಸೇರಿದಂತೆ ಜಿಲ್ಲಾದ್ಯಂತ 464 ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಹತ್ತಿ ಜಿನ್ನಿಂಗ್ ಕಾರ್ಖಾನೆಗಳು, ರೈಸ್ ಮಿಲ್‌ಗಳು ಹಾಗೂ ಪಡಿತರ ಸಾಗಣೆ, ಉಗ್ರಣಗಳು ಅಲ್ಲದೆ ಹಾರು ಬೂದಿ ಸಾಗಿಸಲು ನಗರಕ್ಕೆ ದಿನನಿತ್ಯ ನೂರಾರು ಲಾರಿಗಳು ಸರಕು ಸಾಗಿಸಲು ಬರುತ್ತಿದ್ದು,ಆದರೆ ನಿಲುಗಡೆ ಇಲ್ಲದೆ ಸಮಸ್ಯೆ ಎದುರಾಗಿದೆ. ದಿನ ನಿತ್ಯ ರಾಯಚೂರು ನಗರ ಮೂಲಕ ಬೆಳಗಾವಿಯಿಂದ ಹೈದ್ರಾಬಾದ್, ಕಲ್ಬುರ್ಗಿಯಿಂದ ಬೆಂಗಳೂರುಗೆ ಸಾವಿರಾರು ಲಾರಿಗಳು ಸಂಚಾರ ಮಾಡುತ್ತಿದ್ದು, ಟ್ರಕ್ ಟರ್ಮಿನಲ್ ಇಲ್ಲದಿರುವುದರಿಂದ ರಾತ್ರಿವೇಳೆ ತಂಗಲು ಸಮಸ್ಯೆ ಎದುರಾಗಿತ್ತು. ಇದರಿಂದ ಬೇರೆ ದಾರಿ ಇಲ್ಲದೆ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸುವಂತಾಗಿತ್ತು. ರಾತ್ರಿ ವೇಳೆ ವೇಗವಾಗಿ ಬಂದ ವಾಹನಗಳಿಂದ ಅಪಘಾತಗಳಾಗುತ್ತಿವೆ ಇದರಿಂದ ಚಾಲಕರು ಭಯದಲ್ಲಿ ಲಾರಿ ನಿಲ್ಲಿಸುವಂತಾಗಿದೆ.

ನಿರ್ಮಾಣಕ್ಕೆ 02 ಕೋಟಿ ರೂ. ಮಂಜೂರು

ಜಿಲ್ಲಾಡಳಿತದಿಂದ ನಗರದ ಯರಮರಸ್ ಹತ್ತಿರದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಹೆಸರಿನಲ್ಲಿ 10 ಎಕರೆ ಪ್ರದೇಶದಲ್ಲಿ ಕೆಕೆಆರ್‌ಡಿಬಿಯ ಮೈಕ್ರೋ ಯೋಜನೆಯಲ್ಲಿ 02 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದ್ದು, ಟೆಂಡರ್ ಕರೆಯಲಾಗಿದೆ. ಚಾಲಕರಿಗೆ ಮೂಲಭೂತ ಸೌಲಭ್ಯ,ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಟ್ರಕ್ ಚಾಲಕರಿಗೆ ವಿಶ್ರಾಂತಿ ಪ್ರದೇಶಗಳು, ಪಾರ್ಕಿಂಗ್ ಸ್ಥಳ ಮತ್ತು ಮೂಲಭೂತ ನಿರ್ವಹಣಾ ಸೇವೆಗಳನ್ನು ಒದಗಿಸುತ್ತದೆ. ನಗರದಲ್ಲಿ ಸರಕು ಸಾಗಣೆ ಲಾರಿಗಳ ಸಂಚಾರ ತಗ್ಗಲಿವೆ. ವಾಹನ ತಪಾಸಣೆ, ಸರಕುಗಳನ್ನು ತೂಗುವುದು ಮತ್ತು ನಿಯಂತ್ರಕ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ಸೌಲಭ್ಯಗಳು ದೊರೆಯುತ್ತವೆ. ಸಾಮಾನ್ಯವಾಗಿ ಸರಕು ಸಾಗಣೆ ಏಜೆಂಟ್‌ಗಳು, ಸಾರಿಗೆ ಕಂಪನಿಗಳು ಮತ್ತು ಸರ್ಕಾರಿ ಸಾರಿಗೆ ಅಧಿಕಾರಿಗಳಿಗೆ ಕಚೇರಿಗಳನ್ನು ಒಳಗೊಂಡಿರುತ್ತದೆ.

ಲಾರಿ ಮಾಲಿಕರಿಗೆ ಸಂತಸ

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ವಿಶಾಲವಾದ ಜಾಗದಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸಿದರೆ, ಲಾರಿಗಳ ಚಾಲಕರು ಮತ್ತು ಸಹಾಯಕರು ಲಾರಿಗಳೊಂದಿಗೆ ತಂಗಬಹುದು. ಟರ್ಮಿನಲ್‌ನಲ್ಲಿ ನೀರಿನ ವ್ಯವಸ್ಥೆ ಹಾಗೂ ಇತರೆ ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. ಇದಕ್ಕಾಗಿ ರಾಜ್ಯ ಸರಕಾರವು ಟ್ರಕ್ ಟರ್ಮಿನಲ್ ಸ್ಥಾಪನೆಗೆ ಅವಕಾಶ ಮಾಡಬೇಕು ಎನ್ನುವ ಬೇಡಿಕೆಯನ್ನು ಕಳೆದ 10 ವರ್ಷದಿಂದ ಜಿಲ್ಲಾಡಳಿತಕ್ಕೆ ಹಾಗೂ ಸಾರಿಗೆ ಇಲಾಖೆಗೆ ಲಾರಿ ಮಾಲಕರ ಸಂಘ ಒತ್ತಾಯ ಮಾಡಲಾಗಿತ್ತು. ಇದೀಗ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಟೆಂಡರ್ ಕರೆದಿರುವುದರಿಂದ ಸಂತಸ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲು ಬಹು ದಿನಗಳಿಂದ ಲಾರಿ ಮಾಲಕರ ಸಂಘ ಹಾಗೂ ಸಾರ್ವಜನಿಕರುಬ ಒತ್ತಾಯದ ಮೇರೆಗೆ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಸರ್ಕಾರದ 10 ಎಕರೆ ಜಮೀನು ನೀಡಲಾಗಿದ್ದು, ಜತೆಗೆ ಕೆಕೆಆರ್‌ಡಿಬಿಯ ಮೈಕ್ರೋ ಯೋಜನೆ ಮೂಲಕ 02 ಕೋಟಿ ಅನುದಾನ ನೀಡಿ ಟೆಂಡರ್ ಕರೆಯಲಾಗಿದೆ.

ನಿತೀಶ್ ಕೆ. ಜಿಲ್ಲಾಧಿಕಾರಿ ರಾಯಚೂರು

ರಾಯಚೂರು ಒಂದು ದೊಡ್ಡ ಮಾರುಕಟ್ಟೆ ಪ್ರದೇಶ ಇಲ್ಲಿ ದಿನನಿತ್ಯ ಸಾವಿರಾರು ಲಾರಿಗಳು ಬರುತ್ತವೆ ಹಾಗೂ ಜಿಲ್ಲೆಯ ಮಾರ್ಗವಾಗಿ ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ದೊಡ್ಡ ದೊಡ್ಡ ನಗರಗಳಿಗೆ ಲಾರಿಗಳು ಹೋಗುತ್ತವೆ ಆದರೆ ಇಲ್ಲಿ ಲಾರಿಗಳನ್ನು ನಿಲ್ಲುಸಲು ಟ್ರಕ್ ಟರ್ಮಿನಲ್ ಇರಲಿಲ್ಲ ಜಿಲ್ಲಾಧಿಕಾರಿಗಳು 10 ಎಕರೆ ಸರ್ಕಾರಿ ಭೂಮಿ ನೀಡಿ ಕೆಕೆಆರ್‌ಡಿಬಿಯಿಂದ 02 ಕೋಟಿ ರೂ. ಅನುದಾನ ನೀಡಿ ಟೆಂಡರ್ ಕರೆದಿದ್ದಾರೆ. ಇದರಿಂದ ನಗರದಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ. ಸೈಯದ್ ಹಸನ ಅಧ್ಯಕ್ಷರು ಲಾರಿ ಮಾಲಕರ ಸಂಘ ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net