

ಮಂಡ್ಯ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಮಂತ್ರಿ ರಾಜೀವ್‌ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ದಿನವನ್ನು ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಮಾತನಾಡಿ, ಭಾರತದ ಪ್ರಧಾನ ಮಂತ್ರಿ ದಿ.ರಾಜೀವ್ ಗಾಂಧಿ ಅವರು ದೇಶಕ್ಕೆ ಅಪಾರವಾದ ಕೊಡುಗೆಗಳನ್ನು ಕೊಟ್ಟವರು ಎಂದು ಬಣ್ಣಿಸಿದರು. 18 ವರ್ಷದವರಿಗೆ ಮತದಾರರ ಹಕ್ಕು ಕೊಡುವ ಮೂಲಕ ಯುವಕರಿಗೆ ಅಪಾರವಾದ ಶಕ್ತಿ ತುಂಬಿದವರು. ಡಿ.ದೇವರಾಜ ಅರಸು ಅವರು ಪ್ರಥಮವಾಗಿ ಉಳುವವನಿಗೆ ಭೂಮಿಯ ಒಡೆಯ ಕಾನೂನು ತಂದು ಎಲ್ಲ ನಿರ್ಗತರಿಗೂ, ಭೂ ರಹಿತರಿಗೂ ಭೂಮಿ ಉಳುವ ಅವಕಾಶ ಮಾಡಿಕೊಟ್ಟವರು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಮಾತನಾಡಿ, ರಾಜೀವ್ ಗಾಂಧಿ ಹಾಗೂ ಡಿ.ದೇವರಾಜು ಅರಸು ಅವರು ದೇಶ ಕಂಡ ಮಹಾನ್ ವ್ಯಕ್ತಿಗಳು ಎಂದರು.
ಜಿಲ್ಲಾ ಕೆಡಿಪಿ ಸದಸ್ಯ ಸಿ.ಎಂ.ದ್ಯಾವಪ್ಪ, ಕಾಂಗ್ರೆಸ್ ಮುಖಂಡರಾದ ಹೊಂಬಯ್ಯ, ಮಳವಳ್ಳಿ ಶಿವಣ್ಣ, ಚಂದಗಾಲು ವಿಜಯಕುಮಾರ್, ಕನ್ನಲಿ ಚನ್ನಪ್ಪ, ನಾಗರಾಜು, ಪ್ರಕಾಶ್, ಉದಯ್ ಇತರರಿದ್ದರು.