ಅಭಿವೃದ್ಧಿ ಕೆಲಸ ಮೆಚ್ಚಿ ಡಿ.ಸಿ.ತಮ್ಮಣ್ಣ ವೃತ್ತ ರಚನೆ

oppo_2
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಆಬಲವಾಡಿ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಡಿ.ಸಿ.ತಮ್ಮಣ್ಣ ವೃತ್ತದ ನಾಮಫಲಕವನ್ನು ಗ್ರಾಪಂ ಅಧ್ಯಕ್ಷ ಆರ್.ಸುರೇಶ್ ಅನಾವರಣಗೊಳಿಸಿದರು. ಚಂದ್ರಮ್ಮ, ಸುರೇಶ್, ಜಯಣ್ಣ, ರಾಜಣ್ಣ, ವೀರಣ್ಣ, ಗೋವಿಂದ ಇದ್ದರು.
Published on

ಮದ್ದೂರು:ಡಿ.ಸಿ.ತಮ್ಮಣ್ಣ ಶಾಸಕರಾಗಿದ್ದ ವೇಳೆ ಮದ್ದೂರು ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಆಬಲವಾಡಿ ಗ್ರಾಮ ವೃತ್ತಕ್ಕೆ ಡಿ.ಸಿ.ತಮ್ಮಣ್ಣ ವೃತ್ತ ಎಂದು ನಾಮಕರಣ ಮಾಡಿರುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಸುರೇಶ್ ತಿಳಿಸಿದರು.

ತಾಲೂಕಿನ ಕೊಪ್ಪ ಹೋಬಳಿಯ ಆಬಲವಾಡಿ ಗ್ರಾಮದಲ್ಲಿ ಸೋಮವಾರ ನೂತನವಾಗಿ ಡಿ.ಸಿ.ತಮ್ಮಣ್ಣ ವೃತ್ತದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.\

ಗ್ರಾಮದಲ್ಲಿರುವ ಪ್ರಸಿದ್ಧ ತೋಪಿನ ತಿಮ್ಮಪ್ಪ ದೇವಸ್ಥಾನವನ್ನು ಅವರು ಶಾಸಕರಾಗಿದ್ದ ವೇಳೆ ಪುನರುಜ್ಜೀವನಗೊಳಿಸಿ ಅಭಿವೃದ್ಧಿಪಡಿಸದ್ದರಿಂದಾಗಿ ದೇವಾಲಯ ರಾಜ್ಯದ್ಯಾಂತ ಪ್ರಸಿದ್ಧಿಯಾಯಿತು. ಗ್ರಾಮದ ರಸ್ತೆಗಳು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿರುವುದನ್ನು ಗ್ರಾಮದ ಜನತೆ ಮರೆಯುವುದಿಲ್ಲ ಎಂದರು.

ಕೊಪ್ಪದ 8 ಗ್ರಾಪಂ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ, ಶಿಂಷಾ ಎಡದಂಡೆ ಮತ್ತು ಬಲದಂಡೆ ನಾಲೆಗಳ ಮೂಲಕ ಸಮರ್ಪಕವಾಗಿ ನೀರು ಹರಿಸಿ ಕೃಷಿ ಚಟುವಟಿಕೆಗೆ ಅನುಕೂಲ ಕಲ್ಪಿಸಿದ್ದಾರೆ. ಹೋಬಳಿಯಲ್ಲಿ ಸರ್ಕಾರಿ ಶಾಲೆಗಳನ್ನು ಸ್ಥಾಪನೆ ಮಾಡಿ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಲು ಕಾರಣಿಭೂತರಾಗಿದ್ದಾರೆ ಎಂದರು.

ಸದಾ ಜನಪರವಾಗಿ ಚಿಂತನೆ ನಡೆಸುವ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ದೇವರು ಒಳ್ಳೆಯ ಸ್ಥಾನ ಮಾನ ನೀಡಿ, ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುವಂತೆ ಅವರಿಗೆ ಶಕ್ತಿ ನೀಡಲಿ ಎಂದರು.

ಗ್ರಾಮದಲ್ಲಿ ಡಿ.ಸಿ.ತಮ್ಮಣ್ಣ ಅವರ ಪುತ್ಥಳಿ ನಿರ್ಮಾಣ ಮಾಡುವ ಸಂಬಂಧ ಈಗಾಗಲೇ ಕ್ರಮ ಕೈಗೊಂಡಿದ್ದು, ಶೀಘ್ರವಾಗಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಪುತ್ಥಳಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಇದೇ ವೇಳೆ ಮಾಹಿತಿ ನೀಡಿದರು.

ಎಸ್.ಎಂ.ಕೃಷ್ಣ ಪುತ್ಥಳಿಯು ನಿರ್ಮಾಣ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತಮ್ಮ ಅಧಿಕಾರಾವಧಿಯಲ್ಲಿ ಕೊಪ್ಪ ಹೋಬಳಿಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಆದ್ದರಿಂದ ಹೋಬಳಿ ಕೇಂದ್ರವಾದ ಕೊಪ್ಪದಲ್ಲಿ ಮುಂದಿನ ದಿನಗಳಲ್ಲಿ ಎಸ್.ಎಂ.ಕೃಷ್ಣ ವೃತ್ತವನ್ನು ಮಾಡಿ ಅವರ ಪ್ರತಿಮೆಯನ್ನು ನಿರ್ಮಿಸಲಾಗುವುದು. ಈ ಸಂಬಂಧ ಕೊಪ್ಪ ಹೋಬಳಿಯ 8 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಖಂಡರ ಸಭೆಯನ್ನು ಸಂಕ್ರಾಂತಿ ಹಬ್ಬದ ನಂತರ ಕರೆದು ಕ್ರಮ ಕೈಗೊಳ್ಳಲಾವುದು ಎಂದು ಭರವಸೆ ನೀಡಿದರು.

ಗ್ರಾಪಂ ಉಪಾಧ್ಯಕ್ಷೆ ಚಂದ್ರಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುರೇಶ್, ದೇವಾಲಯದ ಟ್ರಸ್ಟಿಗಳಾದ ಜಯಣ್ಣ, ರಾಜಣ್ಣ, ಮುಖಂಡರಾದ ವೀರಣ್ಣ, ಗೋವಿಂದ, ದಾವಲ್ ರಮೇಶ, ಜಯರಾಮು, ದೇವರಾಜು, ಗಿಡ್ಡನ ತಿಮ್ಮಯ್ಯ, ಭೀಮೇಶ್, ತಮ್ಮಣ್ಣ, ಶಿವಣ್ಣ, ಚುಂಚಮ್ಮ, ದೇವರಾಜು, ಜಯರಾಮು, ತಿಮ್ಮಯ್ಯ, ಭೀಮೇಶ್, ತಿಮ್ಮೇಶ್, ಸತೀಶ್, ಶಿವಮಾದು, ಚಿಕ್ಕಪುಟ್ಟಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net